ತುಮಕೂರು ಲೈವ್

ಶಾಸಕ ಗೌರಿಶಂಕರ್ ಗೆ ಮಾಜಿ ಶಾಸಕರ ಬಹಿರಂಗ ಪತ್ರ

ಬಿ.ಸುರೇಶಗೌಡ, ಮಾಜಿ ಶಾಸಕರು


ಜನರು ನೀಡಿದ ಅಧಿಕಾರ ದುರುಪಯೋಗ ಪಡಿಸಿಕೊಂಡು ತನ್ನ ಹುದ್ದೆಯ ಘನತೆ ಗೌರವಗಳನ್ನು ಕಾಪಾಡಿಕೊಂಡು ನಿಮ್ಮ ಮೇಲೆ ನಂಬಿಕೆಯಿಟ್ಟು, ಆಯ್ಕೆ ‌ಮಾಡಿದ ಈ ಕ್ಷೇತ್ರದ ಜನತೆಯ ನಂಬಿಕೆ ಮತ್ತು‌ ವಿಶ್ವಾಸಗಳನ್ನು ಉಳಿಸಿಕೊಂಡು ‌ಯಾವುದೇ ರಾಗ, ದ್ವೇಷಗಳಿಲ್ಲದೇ, ಶಾಂತಿಯುತವಾಗಿ ಕ್ಷೇತ್ರವನ್ನು ಮುನ್ನಡೆಸಬೇಕಾದ ತಾವು ಹಿಂಸಾಚಾರ, ಹಗೆತನ, ದ್ವೇಷದ ದಳ್ಳುರಿಯಿಟ್ಟು, ಶಾಂತಿ ನೆಲೆಸಿದ್ದ,ನಮ್ಮ ಗ್ರಾಮಗಳಲ್ಲಿ ಅಶಾಂತಿ ಉಂಟುಮಾಡಿ ಜನತೆಯ ನೆಮ್ಮದಿ ಹಾಳುಮಾಡುತ್ತಿರುವುದು ಸರಿಯಲ್ಲ.ಪ್ರಜ್ಞಾವಂತರಿರುವ ಗ್ರಾಮಾಂತರ ಜನರಿಗೆ ತಿಳಿದಿದೆ. ನಾನು ಎರಡುಬಾರಿ ಕ್ಷೇತ್ರದ ಶಾಸಕನಾಗಿ, ಜನರ ಶಾಂತಿ ನೆಮ್ಮದಿ ಅವರ ಮತ್ತು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೆ. ನನ್ನ ಅಧಿಕಾರದ ಅವಧಿಯಲ್ಲಿ ಇಂತಹ ಜಗಳ, ಗಲಭೆ ಗ್ರಾಮದಲ್ಲಿ ಶಾಂತಿಗೆ ಭಂಗ ತರುವಂತಹ ಹೀನ ಕೃತ್ಯಗಳನ್ನು ನಾನಾಗಲಿ ನನ್ನ ಕಾರ್ಯಕರ್ತರಾಗಲಿ ಮಾಡಿರುವುದಿಲ್ಲ ಮುಂದೆಯೂ ಮಾಡುವುದಿಲ್ಲ.ಆದರೆ ಇದೀಗ ನಾವು ನಮ್ಮ‌ಜನರು ಇನ್ನು ಏನೇನು ನೋಡಬೇಕೋ ಎನ್ನುವಂತಹ ವಾತಾವರಣ ಸೃಷ್ಟಿಸುತ್ತಿದ್ದೀರಿ.
ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಪರಿಹಾರ ಮಾಡದೇ ಯಾರು ಪರಿಹರಿಸಲು ಸಾಧ್ಯ ಎನ್ನುವ ಪ್ರಶ್ನೆ ಜನತೆಯಲ್ಲಿ ಎದುರಾಗಿದೆ.ಮೊನ್ನೆ ನಡೆದ ಹೊನ್ನೇನಹಳ್ಳಿ ಹಲ್ಲೆ ಪ್ರಕರಣದಲ್ಲಿ ತಾವು ತಮ್ಮ ಅನುಯಾಯಿಗಳು ನಡೆದುಕೊಳ್ಳುವ ರೀತಿ ನೀವಿರುವ ಹುದ್ದೆಗೆ ಶೋಭೆ ತರುವಂತಹದ್ದಲ್ಲ.ಹಲ್ಲೆಗೊಳಗಾಗಿ ಗಾಯಾಳು ರಕ್ತ ಸ್ರಾವದಿಂದ ಬಳಲುತ್ತಿದ್ದರೆ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಾದದ್ದು ಮಾನವ ಧರ್ಮ, ಆದರೆ ಅದನ್ನು ಬಿಟ್ಟು ಪೋಲಿಸ್ ಠಾಣೆಯಲ್ಲಿ ಗಾಯಾಳುಗಳು ಮತ್ತು ಅವರ ಕುಟುಂಬ ನಡೆದುಕೊಂಡ ರೀತಿ ಅದಕ್ಕೆ ಬೆಂಬಲಿಸಿ ಪೋಲಿಸ್ ಠಾಣೆಯಲ್ಲಿ ನಿಮ್ಮ ಆಪ್ತ ಸಹಾಯಕ.ಮತ್ತು ನಿಮ್ಮ‌ ಆಪ್ತವಲಯದ ಕೆಲವರು ಠಾಣೆಯಲ್ಲಿ ವೃತ್ತ ನಿರೀಕ್ಷಕರೋಂದಿಗೆ ನಡೆದುಕೊಂಡ ರೀತಿ ಮತ್ತು ನೀವು ಪೋಲಿಸ್ ಸಬ್ಬ್ ಇನ್ಸ್ಪೆಕ್ಟರ್ ರವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ ರೀತಿಯನ್ನು ಗಮನಿಸಿದರೆ ಅನುಮಾನಕ್ಕೀಡು ಮಾಡಿಕೊಡುತ್ತಿದೆ.ನಿಜಕ್ಕೂ ಆ ಹುದ್ದೆಗೆ ನೀವು‌ ಅರ್ಹರೇ ಎನ್ನುವ ಪ್ರಶ್ನೆ ಕಾಡುತ್ತಿದೆ.ಹೊನ್ನೇನಹಳ್ಳಿ ಘಟನೆ ಮತ್ತು ಹಲ್ಲೆಯನ್ನು ನಾವು‌ ಬೆಂಬಲಿಸುವುದಿಲ್ಲ. ಹಲ್ಲೆಯಾಗಿದೆ, ಪೋಲಿಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎನ್ನುವುದು ನನ್ನ ಆಶಯ. ಆದರೆ ನನ್ನ ಅನುಮಾನ ಏನೆಂದರೆ ಗಲಾಟೆ ನಡೆಯಿತು ಎನ್ನಲಾದ ಹದಿನೈದು ನಿಮಿಷಗಳಲ್ಲಿ ತುಮಕೂರು ಗ್ರಾಮಾಂತರ ಪೋಲಿಸ್ ಠಾಣೆಗೆ ಹಲ್ಲೆಗೊಳಗಾದವರು ಅವರ‌ ಕುಟುಂಬದವರು ಬರುತ್ತಾರೆ. ಆದರೆ ಅದೇ ಗ್ರಾಮದ ಜನತೆ ಯಾರು ಅವರ ಪರವಾಗಿ ಅಲ್ಲಿಗೆ ಬರುವುದಿಲ್ಲ‌.ಶಾಸಕರು ನಿಮ್ಮ ಸರ್ಕಾರದ ಅಧಿಕೃತ ಆಪ್ತ ಸಹಾಯಕ ಅಜಯ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಾದ ಹಾಲನೂರು ಅನಂತ್, ಹೀರೆಹಳ್ಳಿ‌ ಮಹೇಶ್, ಬೈರಸಂದ್ರ ಪಾಲನೇತ್ರಯ್ಯ‌ ಇತರರು ಆ ರಾತ್ರಿಯಲ್ಲಿ ಪೋಲೀಸ್ ಠಾಣೆಗೆ ನುಗ್ಗಿದ ರೀತಿ ಕೆಲ ಮಾಧ್ಯಮದವರನ್ನು ಕರೆಸಿ, ಆ ಸಮಯದಲ್ಲಿ ಅಲ್ಲಿ ನಡೆದ ಎಲ್ಲಾ ಘಟನೆಯನ್ನು ಅವಲೋಕಿಸಿದರೆ, ಸದರಿ‌ ಪ್ರಕರಣ ಪೂರ್ವನಿಯೋಜಿತ ಇರಬಹುದೆಂಬ ಅನುಮಾನ ಬರುತ್ತಿದೆ.ಹಲ್ಲೆಯಂತಹ ವಿಚಾರಗಳನ್ನು ಇಟ್ಟುಕೊಂಡು ದ್ವೇಷದ ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ.ಈ ಕ್ಷೇತ್ರದ ಜನರ ಶಾಂತಿ ನೆಮ್ಮದಿಗೆ ಭಂಗ ತರುವಂತಹ ರೀತಿಯಲ್ಲಿ ನಡೆದುಕೊಳ್ಳುವುದು ನಿಮ್ಮ ಹುದ್ದೆಗೆ ಶೋಭೆ ತರುವಂತಹದ್ದಲ್ಲ. ಇನ್ನಾದರೂ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ನಿಲ್ಲಿಸಿ‌, ಈ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ‌ಮಾಡುವುದು ಒಳ್ಳೆಯದು‌.


ಇಂತಿ‌
ಬಿ ಸುರೇಶ್ ಗೌಡ
ಮಾಜಿ ಶಾಸಕರು ಬಿಜೆಪಿ‌ ರಾಜ್ಯ ಕಾರ್ಯದರ್ಶಿ
ತುಮಕೂರು ಗ್ರಾಮಾಂತರ ‌ಕ್ಷೇತ್ರ

Comment here