ತುಮಕೂರು ಲೈವ್

ಶಾಸಕ ಮಸಾಲ ಜಯರಾಂ ವಿರುದ್ಧ ಕೆಂಡಕಾರಿದ ಎಂ.ಟಿ.ಕೃಷ್ಣಪ್ಪ

Publicstory. in


ತುರುವೇಕೆರೆ: ಶಾಸಕ ಮಸಾಲಜಯರಾಂ ವಿರುದ್ಧ ಕೆಂಡ ಕಾರಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಶಾಸಕರು ಲ್ಯಾಂಡ್ ಆರ್ಮಿ ಕಂಪನಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಸಿ.ಎಸ್.ಪುರ ಹೋಬಳಿಯಾದ್ಯಂತ ಹಲವು ಕಾಮಗಾರಿಗಳನ್ನು ಮಾಡಿದ್ದಾರೆ. ಕಳಪೆಯಿಂದ ಕೂಡಿವೆ ಎಂದು ನೇರ ಆರೋಪ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಾಸಕ ಮಸಾಲಜಯರಾಮ್ ಹಾಗೂ ಸಿ.ಎಸ್.ಪುರ ಜಿಲ್ಲಾ ಪಂಚಾಯಿತಿ ಸದಸ್ಯೆಯ ಪತಿ ನಾಗರಾಜ್ ಭೂಸೇನಾ ನಿಗಮದ ಕಾಮಗಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾವಿನಹಳ್ಳಿ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗದಲ್ಲಿದ್ದ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಹೆಬ್ಬಂಡೆಗಳನ್ನು ಮಾರಾಟ ಮಾಡಲಾಗಿದ್ದು ಈ ಬಗ್ಗೆ ತನಿಖೆ ನೆಡೆಯಬೇಕಿದೆ ಎಂದು ಒತ್ತಾಯಿಸಿದರು.

ಈಚೆಗೆ ಗುಬ್ಬಿ ತಾಲ್ಲೂಕು ಕಚೇರಿ ಹಾಗೂ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶಾಸಕ ಮಸಾಲಜಯರಾಂ ದೂರಿದ್ದು ಇದು ಅವರ ಅಪಕ್ವ ಆಡಳಿತ ವೈಖರಿಗೆ ಹಿಡಿದ ಕೈಕನ್ನಡಿಯಾಗಿದೆಂದು ಟೀಕಿಸಿದರು.

ಮಾವಿನಹಳ್ಳಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯ ಗುಣಮಟ್ಟ ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತನ ವಿರುದ್ದ ಸೇಡು ತೀರಿಸಿಕೊಳ್ಳಲು ಶಾಸಕ ಮಸಾಲಜಯರಾಮ್ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದು
ಕಾಮೇಶ್ ವಿರುದ್ದ ಪರಿಶಿಷ್ಟ ಜಾತಿಯವರನ್ನು ಎತ್ತಿಕಟ್ಟಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸ್ಥಳೀಯ ಸಾಕ್ಷಿ ಇಲ್ಲದೇ ಅಟ್ರಾಸಿಟಿ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪೊಲೀಸರು ನ್ಯಾಯಾಲಯದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶಾಸಕರ ಅಣತಿಯಂತೆ ಪ್ರಕರಣ ದಾಖಲಿಸಲು ಮುಂದಾದರೇ ಸಿ.ಎಸ್.ಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆಗೆ ರೂಪಿತವಾದ ಅಟ್ರಾಸಿಟಿ ಕಾಯ್ದೆಯನ್ನು ಕೆಲ ರಾಜಕಾರಣಿಗಳು ಸ್ವಹಿತಾಸಕ್ತಿಗೆ ಅಸ್ತ್ರವಾಗಿ ಬಳಸುತ್ತಿರುವುದು ದುರುಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ಗೋಷ್ಟಿಯಲ್ಲಿ ತಾ.ಪಂ ಸದಸ್ಯ ತಿಮ್ಮೇಗೌಡ, ಜೆಡಿಎಸ್ ಮಾಧ್ಯಮ ಕಾರ್ಯದರ್ಶಿ ವೆಂಕಟಾಪುರಯೋಗೀಶ್, ಮುಖಂಡರಾದ ರಾಮು, ಕೃಷ್ಣಅವ್ವೇರಳ್ಳಿ, ಗಣೇಶ್, ಗಂಗಣ್ಣ, ವಿಜಯಕುಮಾರ್ ಇದ್ದರು.

Comment here