ತುಮಕೂರ್ ಲೈವ್

ಶಿರಾಗೆ ಕೊರೊನಾ ತಂದ‌ ಕೊರೊನಾ ಪೀಡಿತನ ವಿರುದ್ಧ ಪೊಲೀಸರಿಂದ ಪ್ರಕರಣ

ತುಮಕೂರು: ಶಿರಾದ ಕೊರೊನಾ ಪೀಡಿತ ಪಿ‌ 5813 ವ್ಯಕ್ತಿ ವಿರುದ್ಧ ಶಿರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಿರಾ ನಗರವನ್ನ ಕಂಟೈಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿತ್ತು. ಜೋನ್ ನಲ್ಲಿದ್ದರೂ ಇಲ್ಲಿಂದ ಹಿಂದೂ ಪುರದ ಮಾವನ ಮನೆಗೆ ಹೋಗಿದ್ದಹೆಂಡತಿ ಮಕ್ಕಳೊಂದಿಗೆ ಶಿರಾಗೆ ಬೈಕ್ ನಲ್ಲಿ ವಾಪಸ್ ಬಂದಿದ್ದ.‌ಈ ಕಾರಣದ ಮೇರೆಗೆ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ತನ್ನೊಂದಿಗೆ ತನ್ನ ಕುಟುಂಬದ 6 ಮಂದಿಯನ್ನು ಕರೆ ತಂದಿದ್ದ. ಈತನಿಂದ ಕುಟುಂಬದ ಎಲ್ಲರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ.

Comment here