ಜನಮನ

ಸಣ್ಣ ಗ್ರಾಮದ ಹುಡ್ಗನ ದೊಡ್ಡ ಸಾಧನೆ…

ಲಕ್ಷ್ಮೀಕಾಂತರಾಜು ಎಂಜಿ


ತನ್ನ ಶೈಕ್ಷಣಿಕ ಸಾಧನೆಯಿಂದ ಸಣ್ಣ ವಯಸ್ಸಿನಲ್ಲಿಯೇ ಭಾರತ ಸರ್ಕಾರದಿಂದ ಆಹ್ವಾನಿತರಾಗಿ ಭಾರತದ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ವೀಕ್ಷಕರಾಗಿ ತೆರಳುವ ಅವಕಾಶವನ್ನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಯಶಸ್ ಪಡೆದಿದ್ದಾನೆ.

ಹೌದು. ದೇಶದ ಅಪ್ರತಿಮ ನೂರು ಶೈಕ್ಷಣಿಕ ಹಾಗೂ ಇತರೆ ಸಾಧಕರನ್ನ ಗುರತಿಸಿ ಆಹ್ವಾನಿಸಿ ರುವ ಕಾರಣ ಜನವರಿ ಇಪ್ಪತ್ತಾರರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ದೆಹಲಿಗೆ ಯಶಸ್ ತೆರಳಲಿದ್ದಾನೆ.

ಈ ಅವಕಾಶದಿಂದ ಯಶಸ್ 2020 ರ ದೆಹಲಿಯ ಗಣರಾಜ್ಯೋತ್ಸವದ ಕಾರ್ಯಕ್ರಮದ ಪೇರೇಡ್ ನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಾಕ್ಸ್ ನಲ್ಲಿ ಕುಳಿತು ವೀಕ್ಷಿಸಲಿದ್ದಾನೆ

ಏನಿದು ಸಾಧನೆ?


ಕಳೆದ ಶೈಕ್ಷಣಿಕ ಸಾಲಿನ ಸಿಬಿಎಸ್ ಇ 10 ನೇಯ ತರಗತಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ವಿದ್ಯಾವಾರಿಧಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶಸ್ ಹತ್ತನೇಯ ತರಗತಿ ಸಿಬಿಎಸ್ ಇ ಪರೀಕ್ಷೆಯಲ್ಲಿ 500 ಅಂಕಗಳಿಗೆ 498 ಅಂಕಗಳನ್ನ ಪಡೆಯುವ ಮೂಲಕ ದಕ್ಷಿಣ ವಲಯಕ್ಕೆ ಪ್ರಥಮ ಸ್ಥಾನ ಪಡೆದು ತನ್ನ ಪ್ರತಿಭೆ ಮೆರೆದಿದ್ದ. ಸಿಬಿಎಸ್ ಇ ದಕ್ಷಿಣ ವಲಯಕ್ಕೆ ತಮಿಳುನಾಡು,ಕರ್ನಾಟಕ‌,ಕೇರಳ ಹಾಗೂ ಆಂಧ್ರ ರಾಜ್ಯಗಳು ವ್ಯಾಪ್ತಿಗೆ ಬರಲಿದ್ದು ಈ ನಾಲ್ಕು ರಾಜ್ಯಗಳಿಗೆ ಪರೀಕ್ಷೆಯಲ್ಲಿ ಮೊದಲಿಗನಾಗಿದ್ದು ವಿಶೇಷವಾಗಿತ್ತು.

ಯಶಸ್ ನ ಈ ಶೈಕ್ಷಣಿಕ ಸಾಧೆಯನ್ನ ಗುರುತಿಸಿದ ಭಾರತ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ದೇಶದ ನೂರು ಸಾಧಕರಲ್ಲಿ ಯಶಸ್ ಕೂಡ ಒಬ್ಬನಾಗಿ ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವುದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ‌ ಗ್ರಾಮದ ಕುಂಚಿಟಿಗ ಸಮುದಾಯದ ದೇವರಾಜು ಶ್ರೀಮತಿ‌ ನೇತ್ರಾವತಿ ದಂಪತಿಯ ಪುತ್ರನಾದ ಯಶಸ್ ಗ್ರಾಮೀಣ ಪ್ರದೇಶದ ಶಾಲೆಯಲ್ಲಿಯೇ ಸಿಬಿಎಸ್ ಇ ವಿಭಾಗದಲದಲ್ಲಿ ಓದಿ ಯಾವುದೇ ಟ್ಯೂಷನ್ ಪಡೆದುಕೊಳ್ಳದೆ ಶಾಲೆ ಹಾಗೂ ಸ್ವ ಪರಿಶ್ರಮದಿಂದ ಓದಿ ಫಲಿತಾಂಶದಲ್ಲಿ ದಕ್ಷಿಣವಲಯಕ್ಕೆ ಮೊದಲಿಗನಾಗಿದ್ದು ಅಪ್ರತಿಮ ಸಾಧನೆಯೇ ಸರಿ


ತನ್ನ ಶೈಕ್ಷಣಿಕ ಸಾಧನೆಯಿಂದ ತಮ್ಮ‌ ಮಗ ದೇಶದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಹೋಗುತ್ತಿರುವುದು ತಮಗೆ ಅತ್ಯಂತ ಸಂತೋಷವಾಗಿದೆ

ನೇತ್ರಾವತಿ. ಯಶಸ್ ಅವರ ತಾಯಿ


ಕಳೆದ ಸಿಬಿಎಸ್ ಇ ಫಲಿತಾಂಶದಲ್ಲಿ‌ ದಕ್ಷಿಣ ವಲಯಕ್ಕೆ ಪ್ರಥಮ ಸ್ಥಾನ‌ ಪಡೆದು ತಮ್ಮ‌ ಶಾಲೆಗೆ ಹೆಸರು ತಂದುಕೊಟ್ಟಿದ್ದ ಯಶಸ್ ಮತ್ತೆ ಭಾರತ ಸರ್ಕಾರದ ಸಾಧಕರಾಗಿ ಗುರ್ತಿಸಿರುವುದು ನಮ್ಮ‌ ಶಾಲೆಗೆ ಹೆಮ್ಮೆಯ ವಿಷಯವಾಗಿದೆ.


ಕವಿತ, ಪ್ರಾಂಶುಪಾಲರು,ವಿದ್ಯಾವಾರಿಧಿ ಶಾಲೆ,ಹುಳಿಯಾರು.

Comment here