ತುಮಕೂರು ಲೈವ್

ಸಭಾ ಗೌರವ ಕಾಪಾಡದ ಸಚಿವ ಮಾಧುಸ್ವಾಮಿ:ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿ ಅಸಮಾಧಾನ

Publicstory. in


Turuvekere: ಸಣ್ಣ.ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಧಾರ್ಮಿಕ ಸಭಾ ವೇದಿಕೆಯಿಂದ ನಿರ್ಗಮಿಸುವ ಮುನ್ನಾ ದಿವ್ಯ ಸಾನ್ನಿಧ್ಯ ವಹಿಸಿದ್ದ ನನಗೆ ಕನಿಷ್ಟ ಸೌಜನ್ಯಕ್ಕಾದರೂ ಹೇಳದೆ ತೆರಳಿದ ಸಚಿವರ ನಡೆ ಸಾಧುವಲ್ಲ ಎಂದು ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಹಳ್ಳಿಯಲ್ಲಿ ಶುಕ್ರವಾರ ನಡೆದ ದೇವಸ್ಥಾನ ಉದ್ಘಾಟನಾ ಧಾರ್ಮಿಕ ಸಭೆಯಲ್ಲಿ ಸಚಿವ ಮಾಧುಸ್ವಾಮಿಯವರು ಮತ್ತೊಂದು ಕಾರ್ಯಕ್ರಮಕ್ಕೆ ತೆರಳುವಾಗ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದರು.

ಅದೇ ವೇಳೆ ಶಾಸಕ ಮಸಾಲ ಜಯರಾಮ್ ಸ್ವಾಮೀಜಿಗೆ ಹೇಳಿ ಸಚಿವರನ್ನೇ ಹಿಂಬಾಲಿಸಿದರು. ಇದರಿಂದ ಅಸಮಧಾನಗೊಂಡ ಸ್ವಾಮೀಜಿಗಳು ಸಚಿವ ಮಾಧುಸ್ವಾಮಿಯವರು ಸಭಾ ಗೌರವ ಕಾಪಾಡಲಿಲ್ಲ ಎಂದು ಬೇಸರ ತೋರಿಕೊಂಡತು.

ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ದೇಗುಲ ಸಮಿತಿಯವರು ನೀಡುವ ಗೌರವಕ್ಕಾದರೂ 5 ನಿಮಿಷಗಳ ಸಮಯ ಹೆಚ್ಚಿಗೆ ನೀಡಬಹುದಿತ್ತು. ವೇದಿಕೆಯಲ್ಲಿದ್ದ ನನಗೆ ಒಂದು ಮಾತು ಹೇಳಬಹುದಿತ್ತು. ಸಚಿವರ ಈ ನಡೆ ಜನರಿಗೆ ಯಾವ ರೀತಿಯ ಸಂದೇಶ ನೀಡಬಲ್ಲದು ಎಂದು ಕಿಡಿಕಾರಿದರು.

ಯಾರಿಗೂ ಅಧಿಕಾರ ಅಂತಸ್ತು ಶಾಶ್ವತವಲ್ಲ. ಇದು ರೊಟ್ಟಿ ಮಗುಚಿದ ಕಾಲ ಯಾವಾಗ ಏನು ಬೇಕಾದರೂ ಆಗಬಹುದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Comment here