ತುಮಕೂರು ಲೈವ್

ಸಿದ್ದರಾಮಯ್ಯ ವಿಭಿನ್ನ ಮುಖ್ಯಮಂತ್ರಿ: ಜಾಫೆಟ್

ತುಮಕೂರು: ನಲವತ್ತು ವರ್ಷಗಳ ಸುಧೀರ್ಘ ರಾಜಕಾರಣದ ಅವಧಿಯಲ್ಲಿ ಹಿಂದಿನ ಮುಖ್ಯಮಂತ್ರಿ ಗಳಿಗೆ ಹೋಲಿಕೆ‌ ಮಾಡಿದರೆ ಸಿದ್ದರಾಮಯ್ಯ ಅವರು ವಿಭಿನ್ನ ಮುಖ್ಯಮಂತ್ರಿ ಎಂದು ಬೆಂಗಳೂರು ವಿ.ವಿ‌. ವಿಶ್ರಾಂತ ಕುಲಪತಿ ಪ್ರೊ. ಜಾಫೆಟ್ ತಿಳಿಸಿದರು.

ತುಮಕೂರು ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವರ ಆಡಳಿತ, ಚಿಂತನೆ, ಕಾರ್ಯಕ್ರಮಗಳನ್ನು ನೋಡಿದರೆ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಬಹುದು. ಅರಸು ಪರಂಪರೆಯನ್ನು ಅನುಸರಿಸುತ್ತಾ ಬಂದಿದ್ದರೂ ಸಿದ್ದರಾಮಯ್ಯ ರಾಜಕಾರಣ ಭಿನ್ನ ಎಂದರು.

ಅವರು ನಡೆದು ಬಂದ ದಾರಿ, ಓದು, ಸಾಮಾಜಿಕ ಹಿನ್ನೆಲೆ, ಸಿದ್ಧಾಂತ, ಒಡನಾಟ, ಅಂದಿನ ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಎರಡು ಪ್ರಬಲ ಜಾತಿಗಳು ಇಂದು ರಾಜ್ಯ ರಾಜಕಾರಣವನ್ನು‌ ನಿಯಂತ್ರಣ ಮಾಡುತ್ತಿವೆ. ಸಿದ್ದರಾಮಯ್ಯ ರ ರಾಜಕಾರಣವನ್ನೂ ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಕರ್ನಾಟಕ ಪರಂಪರೆ ಸಾಂಸ್ಕೃತಿಕ ಪರಂಪರೆ ಬಹಳ ಪ್ರಗತಿಪರವಾದದ್ದು. ಸಿದ್ಧಾಂತದ ರಾಜಕಾರಣ ಬದ್ದತೆ ಮತ್ತು ಶುದ್ಧವಾದ ರಾಜಕಾರಣ ಎಂದು ವಿಶ್ಲೇಷಿದರು.

ದೇವರಾಜ ಅರಸು ಜಾತಿಗಳನ್ನು ಸಂಘಟಿಸಿ ರಾಜಕೀಯ ಮಾಡಿದರೆ. ಎರಡು ಪ್ರಬಲ ಜಾತಿಗಳನ್ನು ದೂರ ಇಡಬೇಕಾದರೆ ಜಾತಿ ರಾಜಕಾರಣ ಅನಿವಾರ್ಯ. ಆದರೆ ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡಿದವರಲ್ಲ ಎಂದು ತಿಳಿಸಿದರು.

ಯಾರು ಜಾತಿ ಕಾರಣಕ್ಕೆ ಹಿಂದುಳಿದಿದ್ದಾರೆ, ವಂಚಿತರಾಗಿದ್ದಾರೆ ಅವರ ಸಮಸ್ಯೆಗಳನ್ನು ಬಗೆಹರಿಸಲು‌ ಹೋರಾಡಿದ್ದಾರೆ. ಸಿದ್ದರಾಮಯ್ಯ ಪರಂಪರೆಯನ್ನು ಉಳಿಸಿಕೊಂಡು ಒಳ್ಳೆಯ ರಾಜಕಾರಣ ಮಾಡಿದವರು. ಅವರ ಲೋಕದೃಷ್ಠಿ, ಗಾಂಧೀಜಿ, ಲೋಹಿಯಾ, ಕುವೆಂಪು, ಅನಂತ ಮೂರ್ತಿ, ತೇಜಸ್ವಿ, ಲಂಕೇಶ್, ದೇವನೂರು‌ ಮಹಾದೇವ ಅವರ ಒಡನಾಟ‌ ಇಟ್ಟುಕೊಂಡಿದ್ದಂತವರು ಎಂದರು.

ಕಟ್ಟಕಡೆಯ ಮನುಷ್ಯರಿಗೂ ಅವರ ದೃಷ್ಠಿಯ ಕ್ರಮವಿದೆ. ಕುರುಬ ಎಸ್‌ಟಿ ಮೀಸಲಾತಿ ಕೇಳಿದಾಗ ಇತರ ಜಾತಿಗಳ ಪರವಾಗಿ ಸಿದ್ದರಾಮಯ್ಯ ನವರು ಮಾತನಾಡುತ್ತಾರೆ. ಕುರುಬ ಜಾತಿಗಿಂತಲೂ ಹಿಂದುಳಿದ ಜಾತಿಗಳಿದ್ದಾವೆ. ಅವರಿಗೆ ಪ್ರಾತಿನಿಧ್ಯ ದೊರೆಯಬೇಕು ಎಂದು ಹೇಳಿದ್ದರು. ಇದರಿಂದ ಅವರೆಂಥ ಜಾತ್ಯಾತೀತವಾದಿ ಎಂಬುದು‌ ನಮಗೆ ತಿಳಿಯುತ್ತದೆ ಎಂದರು.

ಮುಖ್ಯಂತ್ರಿಯಾಗಿರುವಾಗ
ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೆ ಇರುತ್ತಿದ್ದರು. ಬಜೆಟ್ ತಯಾರಿಸುವ ತಯಾರಿಗೆ ಶ್ರಮಹಿಸಿದ್ದರು.
ಬಹಳ ಗಂಭೀರವಾಗಿ ಬಡ್ಜೆಟ್ ಗಳನ್ನು‌ ನೋಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುಗುಣವಾಗಿ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿದರು.

ಅಲೆ ಮಾರಿ ಮತ್ತು ಅಲೆಮಾರಿ ಜನಾಂಗ ಮತ್ತು ಮಹಿಳಾ ಕೃಷಿಕರನ್ನು ಪ್ರಸ್ತಾಪ ಮಾಡುತ್ತಾರೆ. ಶೇ೫೦ರಷ್ಟು ಮಹಿಳಾ ಕೃಷಿಕರು ಕರ್ನಾಟಕದಲ್ಲಿದ್ದಾರೆ. ಅವರನ್ನು ಗುರುತಿಸಿ ಬಜೆಟ್ ನಲ್ಲಿ ಪ್ರಸ್ತಾಪ ಮಾಡುತ್ತಾರೆ ಎಂದರು.

ಯಾರು ಇಲ್ಲೀವರಗೆ ಅಲಕ್ಷ್ಯಕ್ಕೆ ಒಳಗಾಗಿದ್ದಾರೆ ಅವರಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.ಅವರ ಉಡುಗೆ ತೊಡುಗೆ ನೋಡಿದರೆ ನಗರ ವಿರೋಧಿ ಎನ್ನುವಂತಿರುತ್ತಾರೆ. ಸಮಾಜದಲ್ಲಿ ಇರುವ ದರ್ಬಲರಿಗೆ ಹೆಚ್ಚು ಒತ್ತು ನೀಡಿದ್ದಾರೆ‌ ಎಂದರು.

ಜಾತಿ ಸಮುದಾಯಗಳನ್ನು ಮೀರಿ ರಾಜಕಾರಣವನ್ನು ಮೀರಿ‌ಕೊಟ್ಟರೂ.. ಸಿದ್ದರಾಮಯ್ಯ ರನ್ನು‌ ಮಾಧ್ಯಮಗಳು ಸೇರಿದಂತೆ ಪಟ್ಟಭದ್ರರು ಒಂದು ಜಾತಿಗೆ ಮಾತ್ರ ಸೀಮಿತ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇವರಾಜ ಅರಸು ಅಧಿಕಾರ ಕಳೆಸುಕೊಂಡಾಗ ಆಟೋದಲ್ಲಿ ಹೋಗಿದ್ದನ್ನು ನಾನು ನೋಡಿದ್ದೇನೆ. ಇಂಥ ಸರಳ ವ್ಯಕ್ತಿಗಳ ನಡೆವೆ ನಾವಿದ್ದೇವೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಇದ್ದರು.

Comment here