ತುಮಕೂರು ಲೈವ್

ಸೀಲ್ ಡೌನ್ ಆಗಿದ್ದ ಗೊರವನಹಳ್ಳಿ ಲಕ್ಷ್ಮಿ ದೇಗುಲ ಓಪನ್ ಯಾವಾಗ..?

ತುಮಕೂರು

ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾದ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಾಲಯದ ಅರ್ಚಕರೊಬ್ಬರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ ಆಗಿತ್ತು.

ಭಕ್ತಾಧಿಗಳ ಅನುಕೂಲಕ್ಕಾಗಿ ಹಾಗೂ ಕೆಲವೇ ದಿನಗಳಲ್ಲಿ ವರ್ಗ ಮಹಾಲಕ್ಷ್ಮಿ ಹಬ್ಬ ಇರುವ ಕಾರಣದಿಂದಾಗಿ ಜುಲೈ 28 ರಿಂದ ಮುಂಜಾನೆಯಿಂದ ಮಹಾಲಕ್ಷ್ಮೀ ದರ್ಶನಕ್ಕೆ ಅನುಕೂಲ ಮಾಡುವುದಾಗಿ ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಡಾ.ನಂದಿನಿದೇವಿ ತಿಳಿಸಿದ್ದಾರೆ.

ಇದರೊಂದಿಗೆ ಜುಲೈ.31ರ ಶುಕ್ರವಾರ ನಡೆಯಲಿರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆ ನಡೆಸುವುದಾಗಿ ತಿಳಿಸಿದೆ.

ಆದರೆ ಭಕ್ತರಿಗೆ ಮಹಾಲಕ್ಷ್ಮೀ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಹೂವು-ಹಣ್ಣು-ಕಾಯಿ ಮತ್ತು ಪ್ರಸಾದ ವಿನಿಯೋಗ ನಿಷೇಧಿಸಲಾಗಿದೆ.

Comment here