ಜಸ್ಟ್ ನ್ಯೂಸ್

ಹಾವು ಹಿಡಿಯುವ ಡ್ಯಾನಿಗೆ ಹಾವು ಕಚ್ಚಿ‌ ಸಾವು

ಬಾಗಲಕೋಟ: ನಗರ ಸೇರಿದಂತೆ ವಿವಿಧ ಕಡೆ ಹಾವು ಹಿಡಿದು ಅರಣ್ಯಕ್ಕೆ ಬಿಡುತ್ತಿದ್ದ ಹಾಗೂ ಮನೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಂಘ ಸಂಸ್ಥೆಗಳ‌ಕಚೇರಿಗಳಲ್ಲಿ ಹಾವು ಇದ್ದರೆ ಪೋನ್ ಕರೆ ಮಾಡಿದರೆ ಸಾಕು ತಕ್ಷಣ ಬಂದು ಹಾವು ಹಿಡಿದುಕೊಂಡು ಹೋಗುತ್ತಿದ್ದ ನಗರದ ಉರಗ ತಜ್ಞ ರೆಂದೆ ಖ್ಯಾತಿಯಾಗಿದ್ದ ಡ್ಯಾನಿಯಲ್ ನ್ಯೂಟನ್ ಇಂದು ಹಾವು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಡ್ಯಾನಿಯಲ್‌ ಕಳೆದ‌ ಹತ್ತಾರು ವರ್ಷಗಳಿಂದ‌ ಯಾವುದೇ ಫಲಾಪೇಕ್ಷವಿಲ್ಲದೇ ಸಮಾಜಸೇವೆ ಎಂದು ಯಾರಾದರೂ ಕರೆ‌ಮಾಡಿದರೆ ತಕ್ಷಣ ಸ್ಥಳಕ್ಕೆ ಹೋಗಿ ಹಾವು ಹಿಡಿಯುವ ಡ್ಯಾನಿಯಲ್ ಕೊನೆಗೆ ಹಾವು ಹಿಡಿಯಲು ಹೋಗಿ ಹಾವು ಕಚ್ಚಿಸಿಕೊಂಡು ಸಾವನ್ನಪ್ಪಿದರು.

ಇತ್ತೀಚಿಗೆ ಹಾವು ಕಚ್ಚಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು .ಇದಲ್ಲದೇ ಕಳೆದ ಎರಡು ತಿಂಗಳ ಹಿಂದೆ ಮದುವೆ ಕೂಡ ಆಗಿದ್ದರು.ಈಗ ಅವರ ಸಾವಿನ ಸುದ್ದಿಕೇಳಿ ನಗರ ಹಾಗೂ ಸುತ್ತಮುತ್ತಲಿನ ಜನ ದುಃಖ ವ್ಯಕ್ತಪಡಿಸಿದ್ದಾರೆ.

ಹಾವು ಕಡಿದ ಸುದ್ದಿ ಮನೆಯವರಿಗೆ ತಲುಪುತ್ತಿದ್ದಂತೆ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಡ್ಯಾನಿಯಲ್ ನ್ಯೂಟನ್ ದೇಹದಾನ ಮಾಡಿದ್ದಾರೆ.

Comment here