ತುಮಕೂರು ಲೈವ್

ಹೆಣ್ಣಿನ ಒಳತೋಟಿ,‌ಉದಾತ್ತತೆ ಚಿತ್ರಿಸಿದ ಕುವೆಂಪು

Publicstory. in


ತುರುವೇಕೆರೆ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನಿಂದ-ಕುವೆಂಪು ಸಾಹಿತ್ಯದ ಹೆಣ್ಣಿನ ಒಳತೋಟಿ, ಉದಾತ್ತತೆ ಚಿತ್ರಿಸಿದ ಕುವೆಂಪು ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಕೃತಿಯನ್ನು ತನ್ನೆಲ್ಲ ಸ್ಥರದ ಬರಹಗಳಲ್ಲಿ ಮೇಳೈಸಿ, ದೇವರಂತೆ ಕಂಡ ಮೇರು ವ್ಯಕ್ತಿ ಕುವೆಂಪು. ಅದಕ್ಕೆ ಅವರನ್ನು ಆಂಗ್ಲ ಕವಿ ವರ್ಡ್ಸ್ವರ್ತ್ ಗೆ ಹೋಲಿಸುವುದನ್ನು ವಾಙ್ಮಯ ವಿಮರ್ಶೆಯಲ್ಲಿ ಕಾಣಬಹುದಾಗಿದೆ. ಕನ್ನಡ ನಾಡಿನ ಎಲ್ಲ ರಂಗಗಳಲ್ಲಿಯೂ ಕನ್ನಡ ಭಾಷೆಯೇ ಆಡಳಿತ ಭಾಷೆಯಾಗಬೇಕೆಂದು ಹಂಬಲಿಸಿದವರು.

ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳಾಗಿ ಎಂಬ ವಿಚಾರ ಕ್ರಾಂತಿಗೆ ಯುವ ಪೀಳಿಗೆ ಹಾಗು ವಿದ್ಯಾರ್ಥಿಗಳಿಗೆ ಕರೆಕೊಟ್ಟು ಆಮೂಲಕ ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ಸಮಾಜವನ್ನು ವಿಶ್ವಮಾನವತೆಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು ಎಂದರು.

ಕನ್ನಡ ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸಾಹಿತ್ಯ ಸೃಜಿಸಿ ಎಲ್ಲರಿಂದ ಸೈ ಎನಿಸಿಕೊಂಡ ಗಟ್ಟಿಕವಿ. ಸಂಸ್ಕೃತದ ರಾಮಾಯಣವನ್ನು ಕನ್ನಡ ಸಾಹಿತ್ಯದ ಹೊಸದೊಂದು ಆಲೋಚನಾ ಕ್ರಮದಲ್ಲಿ ಮರುಕಟ್ಟಿದರು.

ಮಂಥರೆ, ಉರ್ಮಿಳೆಯಂತಹ ಸಣ್ಣ ಸಣ್ಣ ಪಾತ್ರಗಳ ಮೂಖೇನ ಹೆಣ್ಣಿನ ಒಳತೋಟಿ ಹಾಗು ಉದ್ದಾತೆಯನ್ನು ಗಂಭೀರವಾಗಿ ಚಿತ್ರಿಸಿ ಆ ಆಪಾತ್ರಗಳಿಗೆ ಮೌಲ್ವಿಕತೆ ತಂದವರು ಎಂದು ವಿಶ್ಷೇಷಿಸಿದರು.

ಒಕ್ಕಲಿಗ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ನವೀನ್ ಮಾತನಾಡಿ, ಕುವೆಂಪು ಅವರ ತಾರ್ಕಿಕತೆ, ವೈಚಾರಿಕ ಚಿಂತನೆ, ಹಾಗು ವಿಶ್ವಮಾನತ್ವದ ಕಲ್ಪನೆಯೇ ತುಂಬಾ ವಿಭಿನ್ನ. ಜಾತಿ, ಧರ್ಮಗಳ ಸಂಘರ್ಷದಿಂದ ಇಂದು ವಿಷಮಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಾಜದ ನೈರ್ಮಲ್ಯೀಕರಣಕ್ಕೆ ಕುವೆಂಪು ಅವರ ಚಿಂತನೆಗಳು ಆಪ್ಯಾಯಮಾನವಾಗಿ ಕಾಣಿಸುತ್ತವೆ ಎಂದರು.

ಇದೇ ವೇಳೆ ಯುವ ಕವಯಿತ್ರಯರಿಂದ ಕುವೆಂಪು ಕುರಿತ ಕವಿತೆ ವಾಚನ ಮಾಡಿ ಎಲ್ಲರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ನಂರಾಜುಮುನಿಯೂರು, ವಕೀಲ ಪಿಎಚ್.ಧನಪಾಲ್, ತುರುವೇಕೆರೆ ಪ್ರಸಾದ್, ಎಂ.ಎಸ್.ಕುಮಾರ ಸ್ವಾಮಿ ಮತ್ತು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Comment here