Friday, April 12, 2024
Google search engine
Homeತುಮಕೂರು ಲೈವ್ಏಕೆ ಬರೆಯಬೇಕು? ನಟರಾಜ್ ಬೂದಾಳ್ ಪ್ರಶ್ನೆ

ಏಕೆ ಬರೆಯಬೇಕು? ನಟರಾಜ್ ಬೂದಾಳ್ ಪ್ರಶ್ನೆ

ಅರುಂಧತಿ ಅವರ ‘ಜೀವಜಾಲದ ಸಗ್ಗ’ ಕವನ ಸಂಕಲನ ಲೋಕಾರ್ಪಣೆ

Publicsrory


Tumkuru: ಏಕೆ ಬರೆಯಬೇಕು ಎಂಬುದರ ಕುರಿತು ಬರಹಗಾರರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಹಿತಿ-ಚಿಂತಕ ಡಾ. ಎಸ್. ನಟರಾಜ ಬೂದಾಳು ಅವರು ಉದಯೋನ್ಮುಖ ಬರಹಗಾರರಿಗೆ ಸಲಹೆ ನೀಡಿದರು.

ಧಾನ್ಯ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ತುಮಕೂರು ನಗರದ ಕನ್ನಡ ಭವನದಲ್ಲಿಆಯೋಜಿಸಿದ್ದ ಸಮಾರಂಭದಲ್ಲಿ ಕವಯತ್ರಿ ಡಿ. ಅರುಂಧತಿ ಅವರ ‘ಜೀವಜಾಲದ ಸಗ್ಗ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇವತ್ತಿನ ದಿನಗಳಲ್ಲಿ ಬಹಳಷ್ಟು ಬರಹಗಾರರು ತಮ್ಮ ತಮ್ಮ ಕೃತಿಗಳ ಮೂಲಕ ಹೊರ ಬರುತ್ತಿರುವುದು ಸಂತಸದ ಸಂಗತಿ. ಆದರೆ, ಬರಹದ ಮುನ್ನ ತಾನೇಕೆ ಬರೆಯುತ್ತಿರುವೆ ಎಂಬ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಸಾಹಿತ್ಯ ಕೃತಿ ರಚನೆಗೂ ಸ್ವ-ಅವಲೋಕನದ ನಡೆಯು ಕಾರಣವಾಗುತ್ತದೆ. ಅಂತಹ, ಪ್ರಾಮಾಣಿಕ ಕೃತಿಯು ಬರಹದ ವೈವಿಧ್ಯಮಯ ಆಯಾಮಗಳಲ್ಲಿ ಸೌಂದರ್ಯವನ್ನು ತುಂಬಿಕೊಂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಮರಸ್ಯಕ್ಕೆ ಧಕ್ಕೆ: ರಾಷ್ಟ್ರಪ್ರೇಮದ ಹೆಸರಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ವಿದ್ಯಮಾನಗಳು ನಡೆಯುತ್ತಿವೆ. ತಿಂದ ತಟ್ಟೆಗೆ ಒದೆಯುವ ಅಪಾಯಕಾರಿ ಪ್ರವೃತ್ತಿ ಕಾಣುತ್ತಿದ್ದೇವೆ. ಮುಂದೆ ಉಣ್ಣಲು ತಟ್ಟೆ ಬೇಕಾಗುತ್ತದೆ ಎಂಬ ಕನಿಷ್ಠ ಅರಿವು ಇಲ್ಲದಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ. ಬದುಕಿನ ಸೂಕ್ಷ್ಮತೆಗಳನ್ನು ತಿಳಿದು ಸಾಮರಸ್ಯದಿಂದ ಬಾಳಬೇಕಿದೆ ಎಂದು ಆಶಿಸಿದರು.

ಕಾವ್ಯ ಜೈವಿಕ ಕ್ರಿಯೆಯಲ್ಲ: ಕಾವ್ಯ ಎಂದಿಗೂ ಜೈವಿಕ ಕ್ರಿಯೆ ಆಗದು. ಅದು, ಭಾಷೆಯೂ ಜೈವಿಕವಲ್ಲ. ಆದರೆ, ಇವುಗಳಲ್ಲಿ ಜೀವ ಇದೆ. ಜೀವಿಗಳಿಗೆ ಮಾತ್ರವಲ್ಲ ಕಾವ್ಯವು ಸಮಸ್ತ ಲೋಕಕ್ಕೂ ಅಗತ್ಯವಿದೆ. ಲೋಕದ ನಡೆಯಲ್ಲಿ ಪ್ರಜ್ಞೆಯು ವ್ಯಕ್ತವಾಗುತ್ತದೆ. ಈ ಪ್ರಜ್ಞೆಯ ಚಲನಶೀಲತೆಯಿಂದಾಗಿ ಲೋಕ ಆರೋಗ್ಯವಾಗಿದೆ. ಚಲನಶೀಲತೆ, ಬಹುತ್ವ ಎಲ್ಲವೂ ಮುಖ್ಯ ಎಂದರು.

ಲೇಖಕ ಡಾ.ಓ.ನಾಗರಾಜು ಅವರು ಕವನ ಸಂಕಲನ ಕುರಿತು ಮಾತನಾಡಿದರು, ಚಿಂತಕ ಕೆ.ದೊರೈರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪಮುಖ್ಯ ಅತಿಥಿಗಳಾಗಿದ್ದರು. ಕವಯತ್ರಿ ಡಾ.ಅರುಂಧತಿ, ಧಾನ್ಯ ಪ್ರಕಾಶಕನದ ಮಲ್ಲಿಕಾರ್ಜುನ ಹೊಸಪಾಳ್ಯ ಸೇರಿದಂತೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಡಾ. ಹೆಚ್.ವಿ.ರಂಗಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಲಕ್ಷಿರಂಗಯ್ಯ ನಿರೂಪಿಸಿದರು, ವಿಜಯ ಡಿ. ಮತ್ತು ಅಕ್ಕಮ್ಮ ಪ್ರಾರ್ಥಿಸಿದರು. ರಾಣಿ ಚಂದ್ರಶೇಖರ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?