Friday, April 19, 2024
Google search engine
Homeತುಮಕೂರು ಲೈವ್ಮನ ಮನದಲ್ಲಿ ಬೆಳಗಿದ ಬುದ್ಧ

ಮನ ಮನದಲ್ಲಿ ಬೆಳಗಿದ ಬುದ್ಧ

ಮಕ್ಕಳಿಂದ ಮನೆಯಲ್ಲಿ ಬುದ್ದ ಪೂಜೆ.

Publicstory. in


ತುಮಕೂರು: ಜಿಲ್ಲೆಯಲ್ಲಿ ಮನ ಮನದಲ್ಲೂ ಬುದ್ಧ ಬೆಳಗಿದ. ಬುದ್ಧಪೂರ್ಣಿಮೆ ಅಂಗವಾಗಿ ಮನೆ ಮನೆಗಳಲ್ಲಿ ಬುದ್ಧನಿಗೆ ಪೂಜೆ ಸಲ್ಲಿಸಲಾಯಿತು. ಕೆಲವು ಮನೆಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೂ ಹೂಮಾಲೆ ಹಾಕಿ ಗೌರವಿಸಿದರು.

ಕರ್ನಾಟಕ ಬೌದ್ಧ ಸಮಾಜದ ತುಮಕೂರು ಘಟಕವು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಬಿ.ಅವರ ನೇತೃತ್ವದಲ್ಲಿ “ಬುದ್ಧೋತ್ಥಾನ -ವೈಶಾಖ ಹುಣ್ಣುಮೆ ಕಾರ್ಯಕ್ರಮ “ವನ್ನು zoom app ಬಳಸಿ online ಮೂಲಕ ಆಚರಿಸಿತು.


ಬೆಂಗಳೂರು ಕೇಂದ್ರ ವಿ.ವಿ.ಕುಲಸಚಿವ ಪ್ರೊ,ರಮೇಶ್ ಅವರು, ಸಕಲ ಜೀವ ರಾಶಿಗೂ ಒಳಿತು ಬಯಸಿದ ಬುದ್ದ ನಿಸರ್ಗ ಮತ್ತು ಮಾನವೀಯತೆ ಮೌಲ್ಯ ಪುನರ್ ಸ್ಥಾಪನೆ ಮಾಡಿದ ಮಾಹಾದಾರ್ಶನಿಕ ಎಂದು ಬಣ್ಣಿಸಿದರು.


ಬುದ್ದವಂದನೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಪೂಜ್ಯ ಭೋದಿದತ್ತ ಬಂತೇಜೀಯವರು,ಜಗತ್ತಿನ ಬಹುತೇಕ ರಾಷ್ಟ್ರಗಳು ಇಂದು ಬುದ್ದಪೂರ್ಣಿಮೆಯನ್ನು ಆಚರಿಸುತ್ತಿವೆ. ಭಾರತದಲ್ಲಿ ಹುಟ್ಟಿದ ಈ ಮಹಾತ್ಮನ ಚಿಂತನೆಗಳು ವಿಶ್ವಕ್ಕೆ ಸರ್ವ ಕಾಲಕ್ಕೂ ಅಗತ್ಯವಾಗಿವೆ. ಹಾಗಾಗಿ ಪ್ರತಿ ಭಾರತೀಯನೂ ಹೆಮ್ಮೆಯಿಂದ ಬದುಕುವ ತತ್ವಜ್ಞಾನಿಯಾಗುವ ಆರ್ಹತೆ ದಕ್ಕುವುದು ಬುದ್ದರ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಎಂದು ಹೇಳಿದರು.

ನಾಲ್ಕು ಶ್ರೇಷ್ಠ ಸತ್ಯಗಳನ್ನು ಮತ್ತು ಅಷ್ಟಾಂಗ ಮಾರ್ಗ ನೈಜ ಬದುಕಿಗೆ ಬೇಕಾಗುವ ಅಂಶಗಳು ಸ್ವತಃ ಅನುಭವಿಸಿ ಹೇಳಿದ ವಿಚಾರಗಳು ವೈಚಾರಿಕತೆ ಮತ್ತು ಆಧ್ಯಾತ್ಮಿಕತೆಯ ನೆಲೆಯೊಳಗೆ ,ದ್ಯಾನ ಮತ್ತು ಅನಾಪಾನಸತಿ ಪಾಲನೆಯ ಮೂಲಕ ಅರ್ಥ ಮಾಡಿಕೊಂಡು ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು .

ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಿಶ್ರಾಂತ ಕುಲಪತಿಗಳಾದ ಪ್ರೊ .ಹಿ.ಚಿ.ಬೋರಲಿಂಗಯ್ಯ ರವರು.ಬುದ್ದ ಸಿದ್ಧಾರ್ಥನಾಗಿದ್ದಾಗ ಸಮಾಜದ ಉನ್ನತಿಗಾಗಿ ಚಿಂತಿಸಿ ತೆಗೆದುಕೊಂಡ ವಿವೇಕದ ನಿರ್ದಾರ ಇಂದು ಪ್ರಬುದ್ಧ ಚಿಂತನೆಗಳನ್ನು ಜಗತ್ತು ಒಪ್ಪಿಕೊಳ್ಳಲು ಸಾದ್ಯವಾಯಿತು ಎಂದರು.

ಬಾಬಾಸಾಹೇಬ್ ಬುದ್ದ ದಮ್ಮ ಸ್ವೀಕರಿಸಿ ಇತಿಹಾಸದ ಕಾಲ ಗರ್ಭದಲ್ಲಿ ಹುದುಗಿದ್ದ ನೈಜ ಸತ್ಯಗಳನ್ನು ಹೊರತಂದರು. ಸುಮಾರು 2564 ವರ್ಷಗಳ ಇತಿಹಾಸದ ಬುದ್ದರ ತತ್ವಗಳು ಇಂದಿಗೆ ಜೀವಂತವಾಗಿ ಎಲ್ಲಾ ಕಡೆ ಹಬ್ಬುತ್ತಿರುವುದು ಇಂದಿನ ಸಾಮಾಜಿಕ ಸುಧಾರಣೆಗೆ ಅಗತ್ಯವಾದ ಸಿದ್ದೌಷದ ಮಾಲ್ಯಗಳ ವೃದ್ಧಿಗೆ ಆತನ ಸಂದೇಶಗಳು ಅರ್ಥ ಪೂರ್ಣವಾದವೂ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಯಕ್ ಮಾತನಾಡಿ ಬುದ್ದ ನಮ್ಮ ನೆಲಕ್ಕೆ ಬಿತ್ತಿದ ವೈಚಾರಿಕತೆಯ ಜೀವನ ಮೌಲ್ಯಗಳ ಬೀಜ ಹನ್ನೆರಡನೆಯ ಶತಮಾನದ ಬಸವಣ್ಣ ಸಾರಿದ ತತ್ವಗಳ ಸಾರವೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಬುದ್ದನ ಪಂಚಶೀಲ ತತ್ವಗಳು ಕಳಬೇಡ ಕೊಳಬೇಡ….ಎಂಬ ಬಸವಣ್ಣನ ವಚನಗಳಿಗೆ ಪೂರಕವಾಗಿರುದು ,ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನದ ಆಶಯಗಳು ಎಲ್ಲವೂ ಇಂದಿಗೆ ಸರ್ವ ಶ್ರೇಷ್ಠ ಜ್ಞಾನದ ಕುರುಹುಗಳಾಗಿವೆ ಎಂದು ತಿಳಿಸಿದರು.

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಮೋಹನ್ ಚಂದ್ರ ಗುತ್ತಿ ಮಾತನಾಡಿ ಬುದ್ದ ಮತ್ತು ಗಾಂಧೀಜೀ ಇಂದಿನ ಸರ್ವಾಧಿಕಾರಿ ಆಡಳಿತದ ಸಮಾಜಕ್ಕೆ ಮಾದರಿಯಾಗಬೇಕು.ಅಹಿಂಸೆ ಮತ್ತು ಶಾಂತಿ ಜಗತ್ತಿಗೆ ಬೇಕಾದ ಮೊದಲ ಅದ್ಯತೆಯ ಅಸ್ತ್ರಗಳು ಇವು ನೀಡಿದ ಭಾರತೀಯ ಕೋರಿದರು ನೆಲದಲ್ಲಿ ಬುದ್ಧ ಚಿಂತನೆಗಳನ್ನು ಮತ್ತಷ್ಟು ಹೊರಹೊಮ್ಮಲಿ ಎಂದು ಅಶಿಸಿದರು.

ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಬಸವರಾಜ್ ಜಿ.ಮಾತನಾಡಿ ರಾಜ್ಯಶಾಸ್ತ್ರ ಕ್ಕೆ ಬೇಕಾದ ಚಿಂತನೆಗಳು ಬುದ್ಧ ನೀಡಿದ್ದಾನೆ.ನಾವೂ ತಾರ್ಕಿಕವಾಗಿ ಚಿಂತಿಸಿ ಅನೇಕ ವಿಷಯಗಳನ್ನು ಕಲಿಯುವಂತೆ ಬುದ್ದತ್ವ ಮಾಡಿದೆ ಎಂದರು .

ಶ್ರೀದರ್ ಆಘಲಾಯ , ಡಾ.ರಾಜನಾಯ್ಕ, ಬಳ್ಳಾರಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಕುಮಾರ್ ಸಚಿನ್.ಬಿ.ಎಸ್ , ಮೈಸೂರಿನ ಬಹುಜನ ಕವಿ ಹನಸೋಗೆ ಸೋಮಶೇಖರ್ ಶುಭಾಶಯ ಕೋರಿದರು.

ಡಾ.ರಾಜಶೇಖರ್ ಸಿ ಪ್ರಾರ್ಥನೆ ಮಾಡಿದರು.ಡಾ ನಿಸರ್ಗ ಪ್ರಿಯಾರವರು ವಂದಿಸಿದರು .ಲಕ್ಷ್ಮೀ ರಂಗಯ್ಯ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು ಡಾ.ಸರವಣ ಕೆ. online ನಿರ್ವಹಣೆ ಮಾಡಿದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕವಿ ಪ್ರಾಧ್ಯಾಪಕ ವಿದ್ಯಾರ್ಥಿಗಳು ಬಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?