Friday, March 29, 2024
Google search engine
Homeತುಮಕೂರು ಲೈವ್ಸುಬಾಶ್ಚಂದ್ರ ಬೋಸ್ ನೆನೆದ ಜನಪರಸಂಘಟನೆಗಳ ಒಕ್ಕೂಟ

ಸುಬಾಶ್ಚಂದ್ರ ಬೋಸ್ ನೆನೆದ ಜನಪರಸಂಘಟನೆಗಳ ಒಕ್ಕೂಟ

Publicstory. in


Tumukuru: ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್ ಅವರ 124ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಬಹಳ ಚಿಕ್ಕ ವಯಸ್ಸಿನಲ್ಲೇ ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ ಸುಭಾಶ್ಚಂದ್ರ ಬೋಸ್ ವೈಜ್ಞಾನಿಕವಾಗಿ ದೇಶವನ್ನು ಮುನ್ನಡೆಸಬೇಕು. ಸಮಾಜವಾದಿ ಚಿಂತನೆಗಳ ಮುಖಾಂತರ ದೇಶವನ್ನು ಕಟ್ಟಬೇಕು ಎಂಬುದು ಅವರ ಬಹಳ ದೊಡ್ಡ ನಿಲುವಾಗಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಅವರನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳ ಲಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಅವರ ಹೋರಾಟದ ನಿಲುವುಗಳು ಹಾಗೂ ದೇಶಪ್ರೇಮದ ವಿಚಾರಗಳನ್ನು ಇಂದಿನ ಯುವಕರಿಗೆ ಅರ್ಥ ಮಾಡಿಸಬೇಕಾಗಿದೆ. ಕಾರ್ಮಿಕ ಹಾಗೂ ದುಡಿಯುವ ರಂಗದ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದ ಶುಭಾಶ್ಚಂದ್ರ ಬೋಸ್ ಮಾನವೀಯ ನಿಲುವುಗಳನ್ನು ಗೌರವಿಸುತ್ತಿದ್ದರು.

ಪ್ರಜಾಪ್ರಭುತ್ವದಲ್ಲಿ ಅಗಾಧವಾದ ನಂಬಿಕೆಯನ್ನು ಹೊಂದಿದ್ದರು. ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳು ವಿಚಾರಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದರು.

ಸಾಹಿತಿ ಡಾ.ಓ.ನಾಗರಾಜು ಮಾತನಾಡಿ, ಬೋಸ್ ಅವರ ಜೀವನ ಚರಿತ್ರೆಯು ಅತ್ಯಂತ ರೋಮಾಂಚನ ಮತ್ತು ಒಂದು ದಂತ ಕತೆಯಾಗಿದೆ. ಅವರು ಅತ್ಯಂತ ಚಿಕ್ಕವಯಸ್ಸಿನಲ್ಲೇ ಉನ್ನತ ವಿದ್ಯಾಭ್ಯಾಶವನ್ನು ಪಡೆದು ಅಪಾರವಾದ ಪಾಂಡಿತ್ಯ, ದೇಶಪ್ರೇಮಿ, ಶಿಸ್ತಿನ ಸಿಪಾಯಿ ಎಂದರು.

ಯಾವುದೇ ವಿಚಾರವನ್ನು ಆಳವಾಗಿ ತಿಳಿದುಕೊಂಡು ಮಾತನಾಡುವ ವಾಕ್ಚಾತುರ್ಯವನ್ನು ಹೊಂದಿದ್ದರು. ದೇಶದಿಂದ ಬ್ರಿಟೀಷರನ್ನು ತೊಲಗಿಸಲು ಐಎನ್‍ಎ ಸೈನ್ಯವನ್ನು ಜಾತ್ಯತೀತವಾಗಿ ಕಟ್ಟಿ ಎಲ್ಲ ವರ್ಗದ ಯುವಕ-ಯುವತಿಯರಿಗೆ ಸೈನ್ಯದಲ್ಲಿ ಅವಕಾಶ ನೀಡಿದ್ದರು. ನೀವೊಂದು ಹನಿ ರಕ್ತ ಕೊಟ್ಟರೆ, ನಾನು ದೇಶದ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬುದು ಅವರ ಪ್ರಮುಖ ಘೋಷನೆಯಾಗಿತ್ತು ಎಂದರು.

ಅಂದಿನ ಸಮಾಜವಾದಿ ರಾಷ್ಟ್ರಗಳ ಜೊತೆ ನಿಕಟವಾದ ಸಂಬಂಧ, ಅಲ್ಲಿನ ಸೈನ್ಯವನ್ನು ನಮ್ಮ ದೇಶಕ್ಕೆ ಕರೆತರುವ ಪ್ರಯತ್ನ ಮಾಡಿ ಬ್ರಿಟೀಷರಿಗೆ ನಡುಕವುಂಟು ಮಾಡಿದ್ದರು. ದೇಶಪ್ರೇಮ, ಸಮಾಜವಾದಿ ಚಿಂತನೆ, ಸಮಾಜದ ಕಟ್ಟಡ ಕಡೆಯ ವ್ಯಕ್ತಿಯ ಸ್ವಾತಂತ್ರ್ಯ ಇವುಗಳ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದರು. ಇವರ ಆದರ್ಶಗಳು ಇಂದಿನ ಯುವಜನತೆಗೆ ಮಾದರಿಯಾಗಿವೆ ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಮಾತನಾಡಿ, ರಷ್ಯಾ ಕ್ರಾಂತಿಯು ಸುಭಾಶ್ಚಂದ್ರ ಬೋಸ್ ಮೇಲೆ ಅಗಾಧ ಪರಿಣಾಮ ಬೀರಿತು. ಅದರ ಸ್ಫೂರ್ತಿಯಿಂದಲೇ ಅವರು ನಮ್ಮ ದೇಶದಲ್ಲಿ ಸೈನ್ಯವನ್ನು ಕಟ್ಟಲು ಸಾಧ್ಯವಾಯಿತು ಎಂದರು.

1946ರಲ್ಲಿ ನಾನು ಮೈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ಲ ಯುವಕರ ಕೈಯಲ್ಲಿ ಸಉಭಾಶ್ಚಂದ್ರ ಬೋಸ್ ಪೋಟೋ ಹಿಡಿದು ಬ್ರಿಟೀಷರ ವಿರುದ್ಧ ಪ್ರತಿಭಟನೆ ನಡೆಸಿದೆವು. ಹೋರಾಟ ತೀವ್ರಗೊಂಡಿದ್ದರಿಂದ ನಾವು ಬಂದನಕ್ಕೆ ಒಳಗಾದೆವು ಎಂದು ಮೆಲುಕುಹಾಕಿದರು.

ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ಸುಭಾಶ್ಚಂದ್ರ ಬೋಸ್ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮನ್ನು ಸಂಫೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರು ಐಎನ್‍ಎ ಸೈನ್ಯ ಕಟ್ಟಿದ ಸಂದರ್ಭದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದರು ಎಂದರು.

ಸಿಪಿಐ ಎಂ ನ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದ ಲಕ್ಷ್ಮಿ ಸೆಹೆಗಲ್ ಕೂಡ ಐಎನ್‍ಎ ಸೈನ್ಯದ ಕ್ಯಾಪ್ಟನ್ ಆಗಿದ್ದರು. ಅವರು ಸರ್ಕಾರಿ ವೈದ್ಯ ಆಗಿದ್ದರೂ ವೈದ್ಯ ವೃತ್ತಿಗೆ ರಾಜಿನಾಮೆ ಸಲ್ಲಿಸಿ ದೇಶದ ಸಮಾಜವಾದಿ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ಅಂತಿಮ ದಿನಗಳಲ್ಲಿ ಸುಭಾಶ್ಚಂದ್ರ ಬೋಸ್ ಸೈನ್ಯದ ಜೊತೆಗಿದ್ದ ಹಲವಾರು ಘಟನೆಗಳನ್ನು ಸ್ಮರಿಸಿದರು. ಬೋಸ್ ಮರಣದ ಸುದ್ದಿ ಸೆಹೆಗಲ್ ಅವರ ಅಂತಿಮ ದಿನದವರೆಗೂ ಬಹಳವಾಗಿ ಕಾಡಿತ್ತು ಎಂದು ತಿಳಿಸಿದರು.

ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ರಂಗಧಾಮಯ್ಯ, ಯುವಮುಖಂಡ ಜಿ. ದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?