ಕವನ

ಅಮ್ಮನ ಚಿತ್ರಾನ್ನ

ಡಾII ರಜನಿ ಎಂ


ಚಿತ್ರಾನ್ನ ತಿಳಿ ಹಳದಿ
ಇರಬೇಕು …

ಕಡ್ಲೆಬೇಳೆ ಹಸಿಯೂ
ಇರಬಾರದೂ
ಸೀಯಲೂ ಬಾರದು

ತಿಂದರೆ ಬಾಯಿಗೆ
ಹುಳಿ ಹೊಡೆಯಬಾರದು

ತಿಂದಾದ ಮೇಲೆ
ಕಾರದ ತೇಗು ಬರಬಾರದು

ಈರುಳ್ಳಿ ಹೆಚ್ಚಾಗಿ
ಮಧ್ಯಾಹ್ನ ವಾಸನೆ ಬರಬಾರದು

ಹಸೀ ಕೊತ್ತಂಬರಿ
ಮೇಲೆ ಉದುರಿಸಬಾರದು

ಹಬ್ಬದ ದಿನದ ಚಿತ್ರಾನ್ನ
ದಿನದ ತಿಂಡಿಗಿಂತ ವಿಶೇಷವಾಗಿರಬೇಕು

ಮರದ ಮಗೆಯಲ್ಲಿ ಕಲಸಬೇಕು
ಚೆನ್ನಾಗಿ ಹುರಿಯಬೇಕು

ಎಣ್ಣೆ ಹೆಚ್ಚಾಗಬಾರದು
ಅನ್ನ ಉದುರಾಗಿರಬೇಕು

ಮೇಲೆ ಒಂದಿಷ್ಟು ತುಪ್ಪ ಹಾಕಿ
ಮಿದ್ದು ತಿಂದರೆ..ಆಹಾ

ಅದು ಅಮ್ಮನ ಚಿತ್ರಾನ್ನ

ಅಷ್ಟಕ್ಕೂ

ಹಳದಿ, ಹಸಿರು, ಕೇಸರಿ,ಕೆಂಪು ಬಣ್ಣ
ಗುಂಡು, ಕಡ್ಡಿ ಆಕಾರ
ಬೀಜ, ಎಲೆ, ಹೂವು

ಎಲ್ಲ ಇರುವ ಚಿತ್ರಾನ್ನ

ಅಡಿಗೆಮನೆಯ
ಅನ್ನ ಚಿತ್ತಾರ
ತಾನೆ?

ಹಬ್ಬದ ದಿನ ಚಿತ್ರಾನ್ನ ಮಾಡಿದಾಗ
ಅಮ್ಮನ ಚಿತ್ರಾನ್ನ
ಜ್ಞಾಪಕ ಬಂದು …. ಎನ್ನುವ ಕವಯತ್ರಿ.
ಚಿತ್ರಾನ್ನದ ಸೋಜಿಗವನ್ನು ಈ ಕವಿತೆಯಲ್ಲಿ ಕವಯತ್ರಿ ತೆರೆದಿಟ್ಟಿದ್ದಾರೆ.

Comment here