ಜಸ್ಟ್ ನ್ಯೂಸ್

ಕೊಲೆ ಆರೋಪಿಗಳ ಪತ್ತೆಗೆ ನೆರವಾಯ್ತು ಲಾಕ್ ಡೌನ್

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ  ಬೆಳ್ಳಂಬೆಳಿಗ್ಗೆ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ತಿರುಮಣಿ ಪೊಲೀಸರು  ಬಂಧಿಸಿದ್ದಾರೆ.

ತಾಲ್ಲೂಕಿನ  ವಡ್ರೇವು ಗ್ರಾಮದ ಸತೀಶ್, ಓಬಣ್ಣ,  ಮಾರುತಿನವೀನ್  ಸೇರಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಎಷ್ಟು ಮಂದಿ ಹತ್ಯೆಯಲ್ಲಿ ಭಾಗವಹಿಸಿದ್ದರು. ಯಾರ ಪಾತ್ರ ಏನು ಎಂಬ ಬಗ್ಗೆ ತಿರುಮಣಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಡ್ರೇವು ಗ್ರಾಮದ ಗಂಗಾಧರ್ ಎಂಬುವರನ್ನು ಮಚ್ಚು, ಕಬ್ಬಿಣದ ರಾಡ್ ಇತ್ಯಾದಿ  ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು.

ಲಾಕ್ ಡೌನ್ ಇದ್ದುದರಿಂದ  ಆರೋಪಿಗಳು ನೆರೆಯ ಆಂಧ್ರಕ್ಕೆ ಹೋಗಿ ತಲೆಮರೆಸಿಕೊಳ್ಳಲು ಸಾಧ್ಯವಾಗಿಲ್ಲ. ಗಡಿಯಲ್ಲಿ ಕಟ್ಟು ನಿಟ್ಟಿನ ಪೊಲೀಸ್ ಸರ್ಪಗಾವಲು ಇರುವುದರಿಂದ ಗ್ರಾಮದ ಬಳಿಯೇ ಆರೋಪಿಗಳು ಬಿಡಾರ ಹೂಡಿದ್ದಾರೆ. ಗ್ರಾಮದ ಬಳಿಯ ತೋಟದ ಬಳಿ ಇದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Comment here