ಕವನ

ಸಾಗರ ದಿನದ ನೆನಪಿನಲ್ಲಿ

ಡಾ. ರಜನಿ ಎಂ

ಸಮುದ್ರ / ಸಾಗರ ದಿನ ಸಾಗರ ದಿನವನ್ನು ಜೂನ್ 8 ಆಚರಿಸುತ್ತಾರೆ. ಜಲ ಸಂಪತ್ತು , ಜಲ ಮಾಲಿನ್ಯ ತಡೆಯುವಿಕೆ ಇತ್ಯಾದಿ ಇದರ ಉದ್ದೇಶ. ಆದಾಗ್ಯೂ, ಕವಿ ಮನಸ್ಸಿನವರಿಗೆ ಸಾಗರ ಬೇರೆಯದೇ ಭಾವ .

ಸಾಗರ


ನೀನು ಸಾಗರದಂತೆ..
ನನ್ನೆಡೆಗೆ
ಒಮ್ಮೆ ಚಿಪ್ಪು
ಇನ್ನೊಮ್ಮೆ ಮುತ್ತು.
ಶಂಖು … ಕಸ .. ಏನನ್ನು
ಎಸೆಯುವೆ ಎಂದು
ಎಸೆದಾಗಲೇ
ಗೊತ್ತಾಗುವುದು.

ನೀನು ಕೈ ಬೀಸಿ
ಕರೆದದ್ದಕ್ಕೆ…
ತಾನೇ
ನಾನು
ಬಂದದ್ದು.

ನಿನ್ನೊಂದಿಗೆ
ನನ್ನ ಕನಸುಗಳು…
ಸಮುದ್ರ ದಂಡೆಯ
ಮರಳ ಮೇಲೆ ಕಟ್ಟಿದ
ಮನೆಯಂತೆ.

ಸಮುದ್ರ


ನಿನ್ನಂತೆ …..
ಮತ್ತೆ ಮತ್ತೆ
ಕರೆಯುತ್ತದೆ
ನನ್ನನ್ನು .

ಬಗೆದಷ್ಟು
ಆಳ …
ನಿಲುಕದ್ದು…
ನಿನ್ನಂತೆ.

ಥೇಟ್ ನಿನ್ನಂತೆ
ಕಟ್ಟಾಕಲು
ಸಾಧ್ಯವಿಲ್ಲ.

Comment here