ಪಾವಗಡ: ಪಟ್ಟಣದ ಜಾಮಿಯಾ ಮಸೀದಿ ಬಳಿ ಮಹಿಳೆಯೋರ್ವರ ಚಿನ್ನದ ಮಾಂಗಲ್ಯದ ಸರವನ್ನು ಸೋಮವಾರ ರಾತ್ರಿ ಸರಗಳ್ಳನೋರ್ವ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.
ಪಟ್ಟಣದ ಶಿಲ್ಪ ಎಂಬುವರು ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾಗ ಬಿಳಿಯ ಷರ್ಟ್ ಧರಿಸಿದ್ದ 30 ರಿಂದ 35 ವರ್ಷದ ಯುವಕ ದ್ವಿಚಕ್ರ ವಾಹನದಲ್ಲಿ ಬಂದು ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸುಮಾರು 50 ಗ್ರಾಂ ತೂಕದ 1.5 ಲಕ್ಷ ರೂಪಾಯಿ ಮೌಲ್ಯದ ಸರ ಕಳುವಾಗಿದೆ ಎಂದು ಶಿಲ್ಪಾ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comment here