ಹೆಲ್ತ್

ಪರಿಸರ ರಕ್ಷಣೆಯಲ್ಲಿ ಯುವಜನತೆ ಪಾತ್ರ ಮಹತ್ವದ್ದು; ಮಲ್ಲಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಆರ್. ಚಿಕ್ಕೇಗೌಡ.

 

ತುಮಕೂರು:

ಕೋವಿಡ್‌ನಿಂದ ಬಹಳಷ್ಟು ಮಂದಿಗೆ ಆಮ್ಲಜನಕದ ಕೊರತೆ ಉಂಟಾಯಿತು. ಎಲ್ಲರೂ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಯಿತು. ಆಮ್ಲಜನಕ ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಕೋವಿಡ್‌ ಕಲಿಸಿಕೊಟ್ಟಿದೆ. ಇನ್ನಾದರೂ ಪ್ರತಿಯೊಬ್ಬರೂ ಗಿಡ ಬೆಳೆಸುವಲ್ಲಿ ಆಸಕ್ತಿ ತೋರಬೇಕು’ ಎಂದು ಮಲ್ಲಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಆರ್. ಚಿಕ್ಕೇಗೌಡ ಹೇಳಿದರು.

ತಾಲೂಕಿನ ಮಲ್ಲಸಂದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ತುಮಕೂರು ಹಾಗೂ ಮಲ್ಲಸಂದ್ರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ನಡೆದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂಮಿಯ ಮೇಲೆ ಇರುವ ಪ್ರತಿಯೊಂದು ಮರದಿಂದ ನಮಗೆ ಯಥೇಚ್ಚ ಆಮ್ಲಜನಕ ಸಿಗುತ್ತದೆ. ಇಡೀ ಜೀವ ಸಂಕುಲ ಪರಿಸರವೇ ಪೋಷಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಪ್ರತಿನಿತ್ಯ ಪರಿಸರ ಸಂರಕ್ಷಣೆಯ ಕಾಳಜಿ ವಹಿಸಬೇಕು.
ರೈತರು ಅರಣ್ಯ ಕೃಷಿ ಮಾಡಲು ಹೆಚ್ಚು ಒತ್ತು ನೀಡಿದಾಗ ಅರಣ್ಯ ಪ್ರದೇಶ ವಿಸ್ತರಣೆಗೆ ಅನುಕೂಲ ವಾಗುತ್ತದೆ.ಪರಿಸರ ರಕ್ಷಣೆ ಸಂಪೂರ್ಣ ಯಶಸ್ವಿಯಾಗಬೇಕಾದರೆ ಯುವಜನರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಪ್ರತಿಯೊಬ್ಬರೂ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡರೆ ಇದು ಸಾಧ್ಯವಾಗಲಿದೆ’ ಎಂದರು

ಎಪಿಎಂಸಿ ಉಪಾಧ್ಯಕ್ಷ ಶಿವರಾಜು ಮಾತನಾಡಿ ಮನುಷ್ಯ ಬದುಕಲು ಅರಣ್ಯ ಅತ್ಯವಶ್ಯಕವಾಗಿಬೇಕು. ಆದರೆ, ನಾವು ನಿತ್ಯ ಅರಣ್ಯ ನಾಶ ಮಾಡುತ್ತಿದ್ದರೆ ಮುಂದೆ ಉಸಿರಾಡಲು ಕಷ್ಟವಾಗುತ್ತದೆ. ಇವತ್ತು ಅರಣ್ಯ ನಾಶ, ದೊಡ್ಡ ದೊಡ್ಡ ಮನೆಗಳ ನಿರ್ಮಾಣಕ್ಕಾಗಿ ಮರ ಗಿಡಗಳನ್ನು ಕಡಿದು ಹಾಕಿರುವುದರಿಂದ ಉಸಿರಾಡಲು ತೊಂದರೆ ಪಡುವಂತಹ ಸ್ಥಿತಿ ಬಂದಿದೆ. ಹೀಗಾಗಿ ಯುವಜನತೆ ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಅರಣ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದರು.

 

ಗ್ರಾಪಂ ಉಪಾಧ್ಯಕ್ಷೆ ಪುಷ್ಪ ಲತಾ ರಾಜಣ್ಣ ಮಾತನಾಡಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯುವಜನರು ಪರಿಸರದ ಬಗ್ಗೆ ತಿಳಿದು ಮನೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಸ್ವಯಂ ಸೇವಕ ಎಂ.ಸಿ. ಗಿರೀಶ್. ಎಂ.ಸಿ ,ಗ್ರಾಪಂ ಸದಸ್ಯರಾದ ಎಂ.ಆರ್.ಮಂಜುನಾಥ , ಕೆ.ಎನ್. ನವರತ್ನಕುಮಾರ್ , ಕೆ.ಎಲ್. ಶಂಕರಮೂರ್ತಿ , ಆನಂದಮ್ಮ, ಗಾಯಿತ್ರಮ್ಮಾ, ಮಂಜಮ್ಮ , ಬಿ.ಎಸ್. ಶಿಲ್ಪಾ , ಶಿವದಾನಪ್ಪ, ಕೆ.ಸಿ. ಗೀರಿಶ್ ,ಕೆ.ಹೆಚ್.ಮಂಜುನಾಥ , ಶ್ರೀ ಲಕ್ಷ್ಮೀ, ಸಂತೊಷ್ , ಲೋಕೆಶ್ , ರಂಗಸ್ವಾಮಿ, ಗೀರಿಜಮ್ಮ , ದುಷ್ಯಂತಮಣಿ, ಮಮಾತ, ರತ್ನಮ್ಮ,ಸುಧಾ ,ಮಂಜುನಾಥ ಇನ್ನಿತರರು ಹಾಜರಿದ್ದರು.

Comment here