ಬೆಂಗಳೂರು : ರಾಜ್ಯದಲ್ಲಿ ಮಂಗಳವಾರ 127 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1373 ಗೆ ತಲುಪಿದೆ.
530 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಇಂದು ಸೋಂಕಿಗೆ ಮೂರು ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 40 ಕ್ಕೆ ತಲುಪಿದೆ.
ಬಳ್ಳಾರಿ ಮೂಲದ 61 ವರ್ಷದ ವ್ಯಕ್ತಿ ಸೋಂಕಿನಿಂದ ಬೆಳಗ್ಗೆ ಮೃತಪಟ್ಟಿದ್ದಾರೆ. ವಿಜಯಪುರ ಮೂಲದ 65 ವರ್ಷದ ವ್ಯಕ್ತಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಆಸ್ಪತ್ರೆಗೆ ಬರುವ ವೇಳೆ ಸಾವನ್ನಪ್ಪಿದ್ದಾರೆ. ಅವರಿಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ
ಬೆಂಗಳೂರಿನ 54 ವರ್ಷದ ಹೃದ್ರೋಗದಿಂದ ಬಳಲುತ್ತಿದ್ದರು. 18 ರಂದು ಮೃತಪಟ್ಟಿದ್ದರು. ವ್ಯಕ್ತಿಯ ವರದಿ ಇಂದು ಬಂದಿದ್ದು ಕೊರೊನಾ ಸೋಂಕು ಇರುವುದು ಧೃಡವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 62 ಮಂದಿ, ದಾವಣಗೆರೆ 19,
ಕಲಬುರಗಿ 11, ಶಿವಮೊಗ್ಗ 12, ಬೆಂಗಳೂರು 06, ಉಡುಪಿ 04, ಚಿಕ್ಕಮಗಳೂರು 02, ಹಾಸನ 03, ಉತ್ತರ ಕನ್ನಡ 04, ಯಾದಗಿರಿ 01, ವಿಜಯಪುರ 01, ಚಿತ್ರದುರ್ಗ 01, ಗದಗ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
Comment here