ಕವನ

ಹೈಕುಗಳು

ಜ್ವರ


ಅದು ಹಾಗೆ ಬರಬಾರದು
ಬಂದರೆ ಕೆಂಡದಂತೆ
ಸುಟ್ಟು ಹೋಗಿ ಬಿಟ್ಟು ಬಿಡಬೇಕು…

ಸಣ್ಣಗೆ ಬಿಟ್ಟು ಬಿಡದಂತೆ ಇರಬಾರದು
ಅಂಗಾಲು ಹಣೆ ಬಿಸಿ ಆದಂತೆ….
ಅಮ್ಮ ತಾನೆ ಎಷ್ಟು ಸಾರಿ
ಹಣೆ ಮುಟ್ಟಿ ನೋಡುವಂತೆ
ತನ್ನ ಕೆನ್ನೆಗೆ
ಅಂಗೈ
ಸೋಗಿಸಿ ಕೊಂಡಂತೆ

ಮೊಬೈಲ್


ಮೊಬೈಲ್
ಮಟ್ಟಿದರೆ ಸಾಕು
ಹತ್ತಿಕೊಳ್ಳುತ್ತದೆ ….
ಕೆಲವೊಮ್ಮೆ
ಹತ್ತಿರ ಸುಳಿದರೂ ಸಾಕು…
ನೀನು ಹೇಗೆ
ಪಾಠ ಹೇಳಿ ಕೊಟ್ಟಿದ್ದೀಯೋ
ಹಾಗೆ….

ಡಾII ರಜನಿ

Comment here