ತುಮಕೂರು ಲೈವ್

ಸ್ನೇಹಾಗೆ ಶುಭಾಶಯ ಕೋರಿದ ಶಾಸಕರು

ತುಮಕೂರು ನಗರದ ಬಾರ್ಲೈನ್ ರಸ್ತೆಯ ಪೊಲೀಸ್ ಕ್ವಾಟ್ರಾಸ್ನಲ್ಲಿರುವ ಹೆಡ್ ಕಾನ್ಸ್ಟೇಬಲ್ ಜಿ.ಆರ್ ರಾಜಕುಮಾರ್
ಹಾಗೂ ಶ್ರೀಮತಿ ವಿಜಯಲಕ್ಷ್ಮೀ ರವರ ಪುತ್ರಿ ಜಿ.ಆರ್.ಸ್ನೇಹಾ ರವರು ವಿಜಯನಗರದಲ್ಲಿರುವ ಸೋಮೇಶ್ವರ
ಬಾಲಕಿಯರ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದಿದ್ದು,
ಅವರ ನಿವಾಸಕ್ಕೆ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೇಟಿ ನೀಡಿ ವಿದ್ಯಾರ್ಥಿಗೆ ಹಾಗೂ ಕುಟುಂಬಕ್ಕೆ ಶುಭ
ಹಾರೈಸಿದರು.
ನಂತರ ಮಾತನಾಡಿದ ಶಾಸಕರು ವಿದ್ಯಾರ್ಥಿಗೆ ಮುಂದೆ ನಿನಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ, ಉನ್ನತ ಸ್ಥಾನ ಪಡೆದು, ಜನರಿಗೆ ಉತ್ತಮ ಸೇವೆ ಮಾಡುವ ಗುರಿ
ಇಟ್ಟುಕೊಂಡು ನಡೆಯಬೇಕು ಎಂದು ತಿಳಿಸಿದರು.

Comment here