ಜಸ್ಟ್ ನ್ಯೂಸ್ತುಮಕೂರು ಲೈವ್ನಮ್ಮೂರು

ಕೆನಡ ಸಂಸತ್ತಿನಲ್ಲಿ ಕನ್ನಡ ಕಲರವ

ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರ ಆರ್ಯ
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕುವೆಂಪುರವರ ಮಾತನ್ನು ಇಂದು ಸತ್ಯ ಗೊಳಿಸಿದ್ದಾರೆ. ಸತ್ಯಸಪ್ತಸಾಗರದ ಆಚೆ ಇರುವ ಕೆನಡಾದಲ್ಲಿ ಕನ್ನಡದ ಹಿರಿಮೆ ಕನ್ನಡದ ಬಾವುಟವನ್ನು ಹಾರಿಸಿದ್ದಾರೆ.

ಮೂಲತಃ ಕನ್ನಡಿಗರಾದ ಚಂದ್ರ ಆರ್ಯ ಕೆನಡಾದಲ್ಲಿಯೇ ವಾಸವಾಗಿದ್ದು ಅಲ್ಲಿನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಸಂದರ್ಭದಲ್ಲಿ ಕನ್ನಡ ವರನಟ ರಾಜ್ ಕುಮಾರ್ ಮತ್ತು ಕನ್ನಡದ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿದ್ದಾರೆ.

ಕೆನಡಾದಲ್ಲಿ ವಾಸಮಾಡುತ್ತಿರುವ ಕನ್ನಡಿಗರು 2018 ನವಂಬರ್ 1ನೆ ತಾರೀಕಿನಂದು ಕೆನಡಾದ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಗಮನ ಸೆಳೆದಿದ್ದರು.
ಈಗ ಅದೇ ಸಂಸತ್ತಿಗೆ ಆಯ್ಕೆಯಾಗಿರುವ ಚಂದ್ರ ಆರ್ಯ ಅವರ ಮಾತೃಭಾಷೆಯಾದ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಡಿಯೋ ಗಾಗಿ ಇಲ್ಲಿ ಕ್ಲಿಕ್ಕಿಸಿ https://youtube.com/shorts/a1_ATDdUbj0?feature=share

Comment here