ಪಾವಗಡ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು.
ಲಕ್ಷ್ಮಿಕಾಂತ್ ಈ ಹಿಂದೆ ತಾಲ್ಲೂಕಿನ ಅರಸೀಕೆರೆಯಲ್ಲಿ ಸಬ್ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಠಾಣೆಯಿಂದ ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಯಾಗಿ ಮೇಲ್ದರ್ಜೆಗೆ ಏರಿತ್ತು.
ಈ ಹಿಂದೆ ಇದ್ದ ಇನ್ ಸ್ಪೆಕ್ಟರ್ ನಾಗರಾಜು ಅವರ ಸ್ಥಾನಕ್ಕೆ ಇವರು ವರ್ಗಾವಣೆಯಾಗಿ ಆಗಮಿಸಿದ್ದಾರೆ.
ಭಾನುವಾರ ಮುಸ್ಲಿಂ ಸಮುದಾಯದ ಯುವಕರು, ಮುಖಂಡರು ಠಾಣೆಗೆ ನೂತನವಾಗಿ ಆಗಮಿಸಿರುವ ಲಕ್ಷ್ಮಿ ಕಾಂತ್ ಅವರನ್ನು ಅಭಿನಂದಿಸಿ ಸ್ವಾಗತ ಕೋರಿದರು.
ಸ್ಪೀಡ್ ಮೋಟರ್ಸ್ ಮಾಲೀಕ ಹಾಗೂ ಅಲ್ಪ ಸಂಖ್ಯಾತ ಮುಖಂಡ ಯೂನಸ್, ಇದಾಯತ್, ಶಾಕೀರ್, ಷಕೀಲ್, ಖಲೀಂ, ಬಾಬಾ, ಆಕೀಬ್, ಸದ್ದಾಂ, ಚಾಂದು, ಖಲೀಲ್, ನಿಸಾರ್ ಸಾಬ್ ಉಪಸ್ಥಿತರಿದ್ದರು.
Comment here