ತುಮಕೂರು ಲೈವ್

5 ತಿಂಗಳು ಆಟ ಆಡಿ ಕೊನೆಗೂ ಬೋನಿಗೆ ಬಿತ್ತು ಚಿರತೆ

ಹುಳಿಯಾರು: ಕಳೆದ‌ ಐದು ತಿಂಗಳಿಂದ ಜನರನ್ನು, ‌ಅರಣ್ಯ ಇಲಾಖೆ ಸಿಬ್ಬಂದಿಗೆ ಚೆಳ್ಳೆ ಹಣ್ಣು‌ ತಿನ್ನಿಸುತ್ತಾ ಓಡಾಡಿಕೊಂಡಿದ್ದ ಚಿರತೆ ಮಂಗಳವಾರ ಕೊನೆಗೂ ಬೋನಿಗೆ ಬಿತ್ತು.

ಬುಕ್ಕಾಪಟ್ಟಣ ಅರಣ್ಯ ವ್ಯಾಪ್ತಿಯ ಮಾರೊಹೊಳೆ‌‌ ಗ್ರಾಮದ ಜನರಿಗೆ ಈ ಚಿರತೆ‌ ವಿಪರೀತ ಉಪಟಳ ನೀಡುತ್ತಿತ್ತು.

ಗ್ರಾಮದ ಜಾನುವಾರು, ನಾಯಿಗಳನ್ನು ಕ್ಷಣ ಮಾತ್ರದಲ್ಲಿ ತಿಂದು ಓಡುತ್ತಿತ್ತು.

ಚಿರತೆ ಉಪಟಳಕ್ಕೆ ಜನರು‌ ತೋಟಗಳಿಗೆ ಹೋಗುವುದನ್ನು ಬಿಟ್ಟಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ‌ ಐದು ತಿಂಗಳಿಂದ ಬೋನು ಇಟ್ಟು ಕಾಯುತ್ತಿದ್ದರು. ಆದರೂ ಬೋನಿಗೆ ಚಿರತೆ ಬೀಳುತ್ತಿರಲಿಲ್ಲ. ಕೊನೆಗೂ ಮಂಗಳವಾರ ಸಿಕ್ಕಿ ಬಿದ್ದಿದೆ.

ಇದನ್ನು ಓದಿ


ರಾಮನಗರ: ಬಯಲಿಗೆ ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಭಯಾನಕವಾಗಿ ಎರಗಿರುವ ಚಿರತೆ ಆಕೆಯ ತಲೆಯನ್ನು ದೇಹದಿಂದ ಕಿತ್ತು ಅಲ್ಲಿಂದ ಪರಾರಿಯಾಗಿದೆ.

ಜಿಲ್ಲೆಯ ಕೊಟ್ಟುಗಾನಹಳ್ಳಿಯಲ್ಲಿ ಈಚೆಗೆ ಘಟನೆ ನಡೆದಿದ್ದು, 68 ವರ್ಷದ ಗಂಗಮ್ಮ ಮೃತ ಮಹಿಳೆ.

ಶನಿವಾರ ಮುಂಜಾನೆ ಮನೆಯಿಂದ ಹೊರಗೆ ಬಯಲಿಗೆ ಬಹಿರ್ದೆಸೆಗೆ ತೆರಳಿದಾಗ ಈ ದಾಳಿ ನಡೆಸಿದೆ.

ಆಕೆ ಒಬ್ಬರೇ ಇದ್ದುದ್ದರಿಂದ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಶವವನ್ನು ನೆಲಮಂಗಲ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ನೀಡಲಾಗುವುದು. ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೆಲವೇ ದಿನಗಳ ಹಿಂದಷ್ಟೇ ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ರಾತ್ರಿ ಮನೆಯೊಳಗೆ ನುಗ್ಗಿದ ಚಿರತೆ ಮೂರು ವರ್ಷದ ಮಗುವನ್ನು ಹೊತ್ತುಕೊಂಡು ಹೋಗಿತ್ತು.

Comment here