ಜಸ್ಟ್ ನ್ಯೂಸ್

ಪಾವಗಡ ಗಡಿ ಗ್ರಾಮಗಳ ಪರಿಶೀಲನೆ

ಪಾವಗಡ ತಾಲ್ಲೂಕಿನ ಗಡಿ ಗ್ರಾಮಗಳಾದ ದೊಮ್ಮತಮರಿ, ವಿರುಪಸಮುದ್ರ, ಗುಮ್ಮಘಟ್ಟ, ಚನ್ನಮ್ಮರೆಡ್ಡಿ ಹಳ್ಳಿ, ಅಕ್ಕಮ್ಮನಹಳ್ಳಿ, ಗೌಡೇಟಿ, ಟಿ.ಎನ್.ಪೇಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ  ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಪ್ರಕರಣ ಇಲ್ಲವಾದರೂ ಆಂಧ್ರದ ಹಿಂದೂಪುರ, ಕಲ್ಯಾಣದುರ್ಗದಲ್ಲಿ ಕೊರೊನಾ ಸೋಂಕು ಇರುವುದರಿಂದ ಕಟ್ಟೆಚ್ಚರವಹಿಲಾಸಾಗಿದೆ. ಜಮೀನು, ಕಾಲು ದಾರಿಗಳಲ್ಲಿ  ಓಡಾಡದಂತೆ ಕಟ್ಟೆಚ್ಚರ ವಹಿಸಲಾಗುವುದು.  ಆಂಧ್ರ ಸೇರಿದಂತೆ ಇತರೆಡೆಯಿಂದ ಯಾರೊಬ್ಬರು ಬರದಂತೆ ನಿಯಂತ್ರಸಿಬೇಕು. ಇತರೆ ರಾಜ್ಯದಿಂದ ಯಾರದಾರೂ ಬಂದರೆ ಕೂಡಲೆ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು ಎಂದರು.

http://https://youtu.be/f9F1IKN1Fgo

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ ಮಾತನಾಡಿ. ಅನಗತ್ಯವಾಗಿ ಸಂಚರಿಸುವ ವಾಹನಗಳ ಬಗ್ಗೆ ಆಪ್ ನ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸುಖಾ ಸುಮ್ಮನೆ ಓಡಾಡುವವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಡಿ ವೈ ಎಸ್ ಪಿ ಪ್ರವೀಣ್, ತಹಶೀಲ್ದಾರ್ ವರದರಾಜು, ಕಂದಾಯ ನಿರೀಕ್ಷಕ ಶಿವಾನಂದರೆಡ್ಡಿ, ರಾಜಗೋಪಾಲ್, ಗಿರೀಶ್ ಉಪಸ್ಥಿತರಿದ್ದರು

Comment here