ತುಮಕೂರ್ ಲೈವ್

ಮೀಸಲಾತಿ ನಿಗದಿ; ಪ್ರವಾಸಕ್ಕೆ ತಯಾರಿ

ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಮೀಸಲಾತಿ ನಿಗದಿಪಡಿಸಲಾಯಿತು.

ಸದಸ್ಯರು ಕುತೂಹಲದಿಂದ ಮೀಸಲಾತಿ ನಿಗದಿ ಸಭೆಯಲ್ಲಿ ಭಾಗವಹಿಸಿದ್ದರು.

ಮೀಸಲಾತಿ ನಿಗದಿಯಾದ ನಂತರ ಆಕಾಂಕ್ಷಿಗಳು ಅಧಿಕಾರ ಪಡೆಯಲು ನಿಗದಿತ ಸಂಖ್ಯೆಯ ಸದಸ್ಯರಿಗೆ ಗಾಳ ಹಾಕುತ್ತಿದ್ದಾರೆ.

ಚುನಾವಣೆವರೆಗೆ ತಮ್ಮ ಪಕ್ಷಗಳ ಬೆಂಬಲಿಗರನ್ನು ಬೇರೆ ಪಕ್ಷಗಳ ಬೆಂಬಲಿಗರ ಜೊತೆ ಹೋಗದಂತೆ ತಡೆಯಲು ವಿವಿಧ ರಾಜ್ಯಗಳಿಗೆ ಪ್ರವಾಸ ಕೊಂಡೊಯ್ಯಲಾಗುತ್ತಿದೆ.

ಜಮೀನು, ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದವರಿಗೆ ಇದೀಗ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಂತರರಾಜ್ಯ ಪ್ರೇಕ್ಷಣೀಯ ಸ್ಥಳಗಳು, ಗುಡಿ, ಗೋಪುರಗಳನ್ನು ನೋಡುವ ಅವಕಾಶ ಸಿಕ್ಕಿದೆ ಎಂದು ಹಳ್ಳಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

500 ರಿಂದ 1000 ರೂ ಗೆ ಮತ ಕೊಂಡು ಗೆಲುವು ಸಾಧಿಸಿದವರು,  ಇಂದು ಲಕ್ಷಾಂತರ ರೂಪಾಯಿ ವೆಚ್ಚದ ಪ್ರವಾಸ ಮಸ್ತಿ, ಮೋಜು ಮಾಡುತ್ತಿರುವುದು ಸಾಮಾನ್ಯ ಜನರ ಕೆಂಗಣ್ಣಿಗೆ  ಗುರಿಯಾಗಿದ್ದಾರೆ.

Comment here