Thursday, March 28, 2024
Google search engine
Homeಪುಸ್ತಕ ಬಿಡುಗಡೆ'ಅಹಿಂಸಾ ಮಾರ್ಗ, ಮಾತಂಗಿ ಕುಲಕಥನದ ಚಿಂತನೆ ನಮಗಿಂತೂ ಹತ್ತು ಮಾರು ಮುಂದಿವೆ'

‘ಅಹಿಂಸಾ ಮಾರ್ಗ, ಮಾತಂಗಿ ಕುಲಕಥನದ ಚಿಂತನೆ ನಮಗಿಂತೂ ಹತ್ತು ಮಾರು ಮುಂದಿವೆ’

ತುಮಕೂರು: ಯುವಪೀಳಿಗೆಯ ಚಿಂತನೆಗಳು ನಮಗಿಂತ ಹತ್ತು ಮಾರು ಮುಂದಿವೆ.

ಯುವ ಪೀಳಿಗೆಯ ಬರಹಗಳು ಎಲ್ಲಿ ಓದು ನಿಂತಿತ್ತೋ ಅಲ್ಲಿಂದ ಮುಂದೆ ದಾಟಿಸುವ ಪ್ರಯತ್ನಗಳಾಗಿವೆ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತುಮಕೂರಿನ ಕನ್ನಡ ಭವನದಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟ, ಸ್ಟೂಡೆಂಟ್ ಬುಕ್ ಕಂಪನಿ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ರಚಿಸಿರುವ ಅಹಿಂಸಾ ಮಾರ್ಗ ಮತ್ತು ಮಾತಂಗಿ ಕುಲಕಥನ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇವನೂರು ಮಹಾದೇವ ಅವರು ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಎಂದಾದರೊಂದು ದಿನ ಮೊಳಕೆ ಹೊಡೆಯುತ್ತವೆ ಎಂದು ಹೇಳುತ್ತಾರೆ. ಇದು ಸತ್ಯ. ಆದರೆ ನನ್ನ ದೃಷ್ಟಿಯಲ್ಲಿ ಇದು ಅರ್ಧ ಸತ್ಯದಂತೆ ಕಂಡುಬರುತ್ತದೆ ಎಂದು ಹೇಳಿದರು.

ಬ್ರಿಟೀಷರುವ ಈ ದೇಶಕ್ಕೆ ಬರುವ ಮುನ್ನ ಗುರುಕುಲ ಪದ್ದತಿ ಅಸ್ತಿತ್ವದಲ್ಲಿತ್ತು. ಈಗಲೂ ಅದೇ ಪ್ರಸ್ತಾಪಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರಜ್ಞಾನವಂತ ಸಮೂಹ ಮೌನವಾಗಿದೆ. ಹಾಗಾಗಿ ಇಂದಿನ ಪರಿಸ್ಥಿತಿಯಲ್ಲಿ ಮೌನಕ್ಕಿಂತ ಮಾತಿಗೆ ಹೆಚ್ಚು ಮಹತ್ವವಿದೆ. ಗುರುಕುಲದಲ್ಲಿ ಯಾರಿಗೆ ಶಿಕ್ಷಣ ದೊರೆಯುತ್ತಿತ್ತು ಎಂಬುದನ್ನು ಗಮಿಸಬೇಕಾಗಿದೆ. ಆದ್ದರಿಂದ ಮಾತು ಆಡುವುದು ಉತ್ತಮ ಎಂದು ತಿಳಿಸಿದರು.

ಅಹಿಂಸ ಮಾರ್ಗ, ಮಾತಂಗಿ ಕುಲಕಥನ ಕೃತಿಗಳ ಕರ್ತೃ ಡಾ.ಶಿವಣ್ಣ ತಿಮ್ಲಾಪುರ ದಂಪತಿಗೆ ಸನ್ಮಾನ ಮಾಡಲಾಯಿತು.

ಇಂದು ರಾಜಕಾರಣವನ್ನು ಬಿಟ್ಟು ಬದುಕುವ ಸ್ಥಿತಿ ಇಲ್ಲ. ರಾಜಕೀಯದ ಜೊತೆಗೆ ಇರಲೇಬೇಕು. ಈ ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣ ನಮ್ಮ ಹಕ್ಕುಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಆ ಕಾರಣಕ್ಕೆ ಹೊಸ ಓದಿನ ನೆಲೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಆ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಮ್ಮ ಓದು ಹೊಸ ದಿಕ್ಕಿನಂತೆ ಸಾಗಬೇಕು. ಹೊಸ ಓದಿನ ಕ್ರಮ ವಚನಕಾರರಿಂದಲೇ ಆರಂಭವಾಯಿತು. ಅದರಲ್ಲೂ ಕೂಡ ತಳವರ್ಗದ ವಚನಕಾರರು ಈ ಕೆಲಸವನ್ನು ಮಾಡಿದ್ದಾರೆ ಎಂದು ವಿವರಿಸಿದರು.

ವಚನ ಚಳವಳಿಯ ಸಂದರ್ಭದಲ್ಲಿ ವೈದಿಕತೆಯನ್ನು ವಿರೋಧಿಸಿದ 336 ವಚನಗಳು ದೊರಕಿವೆ. ಈ ವಚನಗಳನ್ನು ಬರೆದವರು 41 ಮಂದಿ ವಚನಕಾರರು. ಅವರು ವೈದಿಕವನ್ನು ವಿರೋಧಿಸಿದರು. ಜೊತೆಗೆ ವೇದ, ಆಗಮ, ಪುರಾಣ, ಸ್ಮೃತಿ, ಶೃತಿ, ತರ್ಕ, ಮೀಮಾಂಸೆ ಇವುಗಳನ್ನು ಬೆಂಕಿಗೆ ಹಾಕಿದರು. ಆದರೆ ಅದೇ ವಚನಕಾರರು ಉಪನಿಷತ್ತುಗಳ ವಿರುದ್ಧ ಮಾತನಾಡಿಲ್ಲ. ಉಪನಿಷತ್ತುಗಳ ನಿಸರ್ಗಕ್ಕೆ ಹತ್ತಿರವಾದವುಗಳು. ಹಾಗಾಗಿ ಅವುಗಳನ್ನು ವಿರೋಧ ಮಾಡಿಲ್ಲ ಎಂದು ಆಭಿಪ್ರಾಯಪಟ್ಟರು.

ಮಲೆ ಮಹದೇಶ್ವರ, ಮಂಟೇಸ್ವಾಮಿ ಮತ್ತು ಜುಂಬಪ್ಪನ ಕಾವ್ಯಗಳು ಶೈವವನ್ನು ಪ್ರತಿಪಾದಿಸುತ್ತವೆ. ಈ ನಾಯಕರೆಲ್ಲರೂ ಶೈವ ಪ್ರತಿಪಾದಕರಾಗಿದ್ದಾರೆ. ಇಂದು ಬಸವ ಧರ್ಮಕ್ಕೂ ಲಿಂಗಾಯತರಿಗೂ ಹೊಂದಾಣಿಕೆ ಇಲ್ಲವಾಗಿದೆ. ಗೊಲ್ಲರು ಕೃಷ್ಣನ ಬೆನ್ನ ಹಿಂದೆ ಬಿದ್ದು ಶೈವವನ್ನು ಮರೆತಿದ್ದಾರೆ ಎಂದು ವಿಷಾದಿಸಿದರು.

ಕೃತಿಗಳನ್ನು ಕುರಿತು ಡಾ.ಹುಲಿಕುಂಟೆ ಮೂರ್ತಿ, ಬರಹಗಾರ ಡಾ.ಹೆಚ್.ಲಕ್ಷ್ಮೀನಾರಾಯಣಸ್ವಾಮಿ ಮಾತನಾಡಿದರು. ಕಲೇಸಂ ಜಿಲ್ಲಾ ಶಾಖೆ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃತಿಗಳ ಕರ್ತೃ ಡಾ.ಶಿವಣ್ಣ ತಿಮ್ಲಾಪುರ ಮಾತನಾಡಿದರು.

ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ.ಟಿ.ಆರ್.ಲೀಲಾವತಿ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟದ ಡಾ.ಶಿವನಂಜಯ್ಯ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಉಪನ್ಯಾಸಕ ಕಂಟಲಗೆರೆ ಸಣ್ಣಹೊನ್ನಯ್ಯ ಉಪಸ್ಥಿತರಿದ್ದರು. ಯುವ ಮುಖಂಡ ಕೊಟ್ಟ ಶಂಕರ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?