Public story
ಶಿರಾ: ಸೊಸೆಯೇ ಅತ್ತೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿರುವ ಘಟನೆ ಶಿರಾ ತಾಲ್ಲೂಕಿನ ಗೌಡನಗೆರೆ ಹೋಬಳಿ ಉಜ್ಜನಕುಂಟೆಯಲ್ಲಿ ಬೆಳಕಿಗೆ ಬಂದಿದೆ.
ಸೊಸೆ ಸುಧಾರಾಣೆ ಕೊಲೆ ಮಾಡಿದಾಕೆ. ಸರೋಜಮ್ಮ (65) ಕೊಲೆಯಾದವಳು.
ಸುಧಾರಾಣೆ ಅವರು ಬೇರೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ಅತ್ತೆಗೆ ಗೊತ್ತಾಗಿದೆ.
ಇದಾದ ನಂತರ ಪ್ರಿಯಕರ ರಂಗಪ್ಪನ ಜತೆ ಸೇರಿ ಅತ್ತೆಗೆ ಪೆಟ್ರೋಲ್ ಸುರಿದು ಕೊಂದಿದ್ದಾಳೆ.
ಮೊದಲಿಗೆ ಬೆಂಕಿ ತಗುಲಿ ಸರೋಜಮ್ಮ ಮೃತ ಪಟ್ಟಿದ್ದಾಗಿ ನಂಬಲಾಗಿತ್ತು. ಆದರೆ ವಿಚಾರಣೆ ನಡೆಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
Comment here