ಜಸ್ಟ್ ನ್ಯೂಸ್

ಮಾವು ಹಾಳಾಗುತ್ತಿದೆಯೇ? ಹೀಗೆ ಮಾಡಿ ನೋಡಿ….

Public story.in


ಮೇ ತಿಂಗಳ ಪ್ರಾರಂಭದಿಂದ ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಬಿರುಸು ಮಳೆ ವರದಿಗಳು ದಾಖಲಾಗಿದ್ದು, ಕಟಾವಿಗೆ ಸಿದ್ಧವಾಗಿರುವ/ಬಲಿಯುತ್ತಿರುವ ಮಾವಿನ ಕಾಯಿಗಳಿಗೆ ಹೆಚ್ಚಿನ ಹಾನಿ ಆಗುತ್ತಿರುವುದು ವರದಿಯಾಗಿದ್ದು, ಮಾವು ಬೆಳೆಗಾರರು ತಮ್ಮ ಫಸಲನ್ನು ರಕ್ಷಿಸಲು ಈ ಕೆಳಕಂಡಂತೆ ಸೂಚನೆ ನೀಡಲಾಗಿದೆ.

ವಾತಾವರಣದಲ್ಲಿ ತೇವಾಂಶ ಅಧಿಕಕೊಂಡು ಹಣ್ಣಿನ ಊಜಿ ನೊಣಗಳ ಹಾವಳಿ ಸಹ ಹೆಚ್ಚುವ ಸಾಧ್ಯತೆ ಇದ್ದು, ಪ್ರಸಕ್ತ ಸನ್ನಿವೇಶದಲ್ಲಿ ಮಾವು ಬೆಳೆಗಾರರು ತಮ್ಮ ಫಸಲನ್ನು ರಕ್ಷಿಸಕೊಳ್ಳಲು ಅಗತ್ಯ ಕ್ರಮಗಳನ್ನು ಕ್ರಮಗಳನ್ನು ಅನುಸರಿಸಬಹುದಾಗಿದೆ.

ಮರದಲ್ಲಿ ಮಾವಿನ ಕಾಯಿಗಳು ಬಲಿತಿದ್ದರೆ ಅವುಗಳನ್ನು ತಡಮಾಡದೇ ಶೀಘ್ರವಾಗಿ ಕೊಯ್ಲು ಮಾಡುವುದು. ಹಣ್ಣಿನ ಊಜಿ ನೊಣಗಳನ್ನು ಹತೋಟಿಯಲ್ಲಿಡಲು ಎಕರೆಗೆ ಕನಿಷ್ಠ 8-10 ಮೋಹಕ ಬಲೆಗಳನ್ನು ಕಟ್ಟುವುದು. ಹಣ್ಣಿನ ಊಜಿ ನೊಣಗಳನ್ನು ನಾಶಪಡಿಸಲು ಮರಗಳಿಗೆ ಕೀಟನಾಶಕವನ್ನು ಪ್ರತಿ ಲೀ. ನೀರಲ್ಲಿ 1.0 ಮಿ.ಲೀ. ಪ್ರಮಾಣದಲ್ಲಿ ಬೆರಸಿ ಸಿಂಪಡಿಸುವುದು. 10 ದಿನಗಳ ನಂತರ (ಕೊಯ್ಲು ಮುಂಚಿತವಾಗಿ 10-15 ದಿನಗಳ ಮೊದಲು) ಈ ಕ್ರಮವನ್ನು ಪುನರಾವರ್ತಿಸುವುದು.

ತೋಟದಲ್ಲಿ ಈಗಾಗಲೇ ಹಣ್ಣಿನ ಊಜಿ ನೊಣಗಳ ಹಾವಳಿಗೆ ತುತ್ತಾಗಿ ನೆಲಕ್ಕೆ ಬಿದ್ದಿರುವ ಹಣ್ಣುಗಳನ್ನು ತಡ ಮಾಡದೇ ಸಂಗ್ರಹಿಸಿ ಅವುಗಳನ್ನು 1 ಅಡಿ ಆಳದ ಗುಣಿ ತೋಡಿ ಹೂತು ಹಾಕಿ, ಮಣ್ಣು ಮುಚ್ಚುವುದರಿಂದ ಹಣ್ಣುಗಳ ಒಳಗೆ ಬೆಳೆಯುತ್ತಿರುವ ಊಜಿ ನೊಣದ ಕೋಶಗಳನ್ನು ನಾಶಪಡಿಸಲು ಸಾಧ್ಯವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸಲಹೆ ನೀಡಿದ್ದಾರೆ.

Comment here