ತುಮಕೂರು ಲೈವ್

ತುರುವೇಕೆರೆ ಬಿಜೆಪಿಗೆ ಜೈ ಎಂದ ಜೆಡಿಎಸ್ ನವರು

Publicstory


ತುರುವೇಕೆರೆ : ತಾಲೂಕಿನ ಆಯರಹಳ್ಳಿ ಗ್ರಾಮದ ಮುಖಂಡರುಗಳು ಜೆ.ಡಿ.ಎಸ್. ಹಾಗೂ ಕಾಂಗ್ರೇಸ್ ಪಕ್ಷ ತೊರೆದು ಶಾಸಕ ಮಸಾಲಜಯರಾಮ್ ಸಮ್ಮುಖದಲ್ಲಿ ಬಿ.ಜೆ.ಪಿ. ಸೇರ್ಪಡೆಗೊಂಡರು.

ಕಾAಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳಲ್ಲಿ ಗುರತಿಸಿಕೊಂಡಿದ್ದ ಮುಖಂಡರುಗಳನ್ನು ಶಾಸಕ ಮಸಾಲಜಯರಾಮ್ ಪಕ್ಷಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡು ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಸಿದ್ಧಾಂತ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇತರೆ ಪಕ್ಷಗಳ ಮುಖಂಡರುಗಳು ನಮ್ಮ ಪಕ್ಷವನ್ನು. ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

ಕೆಲ ವರ್ಷಗಳಿಂದ ಕೇವಲ ಮತಬ್ಯಾಂಕ್ ರೀತಿಯಲ್ಲಿ ಅನೇಕ ಗ್ರಾಮದ ಜನತೆಯನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಮಾಡಿರಲಿಲ್ಲ. ನಾನು ಶಾಸಕನಾದ ನಂತರ ಅಭಿವೃದ್ಧಿ ವಂಚಿತ ಗ್ರಾಮಗಳಲ್ಲಿ ಅಗತ್ಯ ಕಾಮಗಾರಿಗಳಿಗೆ ಚಾಲನೆ ದೊರಕಿಸಿದ್ದೇನೆ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸುವಂತೆ ಮನವಿ ಮಾಡಿದ ಅವರು ಕ್ಷೇತ್ರದ ಜನತೆಯ ಮತದಾರರ ಆಶೋತ್ತರಗಳಿಗೆ ಧ್ವನಿಯಾಗುವೆ ಎಂದರು.

ಆಯರಹಳ್ಳಿ ಗ್ರಾಮದ ಜೆ,ಡಿ,ಎಸ್. ಬೆಂಬಲಿತ ಸದಸ್ಯ ಸಿದ್ದೇಗೌಡ, ಕಾಂಗ್ರೇಸ್ ಪಕ್ಷ ಯತೀಶ್, ಗಿರೀಶ್, ಡಿಪೋ ಮ್ಯಾನೇಜರ್ ಪುಟ್ಟಸ್ವಾಮಿಗೌಡ, ಕಿರಣ್, ರೇವಣ್ಣ, ತಿಲಕ್ , ಗೋಪಿ ಮತ್ತಿತರರು ಬಿ.ಜೆ.ಪಿ. ಪಕ್ಷ ಸೇರಿದ ಪ್ರಮುಖರು.

ಈ ಸಂದರ್ಭದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮೃತ್ಯಂಜಯ, ಗ್ರಾ.ಪಂ. ಅಧ್ಯಕ್ಷ ನಾಗರಾಜ್, ವಿ.ಎಸ್.ಎಸ್.ಎಮ್ . ಅಧ್ಯಕ್ಷ ಪಾಂಡು, ಗುರುಶಾಂತು, ಚನ್ನಕೇಶವ, ಗೌತಮ್, ಸೇರಿದಂತೆ ಅನೇಕ ಕಾರ್ಯಕರ್ತರುಗಳು ಹಾಜರಿದ್ದರು.

Comment here