Friday, April 19, 2024
Google search engine
Homeಜಸ್ಟ್ ನ್ಯೂಸ್ಮಣಿಗಯ್ಯ ತೆರೆದಿಟ್ಟ ಮಹಿಳಾ ಕಥನ: ಮೆಚ್ಚುಗೆ

ಮಣಿಗಯ್ಯ ತೆರೆದಿಟ್ಟ ಮಹಿಳಾ ಕಥನ: ಮೆಚ್ಚುಗೆ

ತುಮಕೂರು: ಸಂಶೋಧನಾ ಪ್ರಕಾಶನ ತುಮಕೂರು ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ತುಮಕೂರು ಇವರ ಸಹಯೋಗದಲ್ಲಿ ಪ್ರೊ.ಎಲ್ ಮಣಿಗಯ್ಯ ನವರ ಭಾರತದಲ್ಲಿ ಮಹಿಳಾ ಸಬಲೀಕರಣ ಸಮಸ್ಯೆಗಳು ಮತ್ತು ಸವಾಲುಗಳು ಕೃತಿ ಬಿಡುಗಡೆ ಸಮಾರಂಭವನ್ನು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು .

ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಗಳಾದ ಡಾ ವಿದ್ಯಾಕುಮಾರಿ ರವರು ಮಾತನಾಡಿ ಭಾರತದಲ್ಲಿ ಮಹಿಳಾ ಸಬಲೀಕರಣ ಎಂದರೆ ಕ್ಲೀಷ್ಟೀಯ ಪದ ಅನ್ನಿಸುತ್ತಿದೆ. ಯಾಕೆಂದರೆ ಮಹಿಳೆ ಇಂದಿಗೂ ಅಬಲೆಯಾಗಿಯೇ ಉಳಿದಿದ್ದಾರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೂ ಶೇಖಡವಾರು ಪ್ರಮಾಡ ಕಡಿಮೆ ಇದೆ ಎಂದರು.

ಉನ್ನತ ಶಿಕ್ಷಣದಿಂದ ಇಂದಿಗೂ ವಂಚಿತರಾಗುತ್ತಿದ್ದಾರೆ ಸಮಾನ ಅವಕಾಶಗಳು ಇದ್ದರು ಬದುಕಿನಲ್ಲಿ ಸ್ಥಾನಮಾನಗಳ ವೈರುದ್ಯಗಳು ಮತ್ತು ಸಮಸ್ಯೆಗಳನ್ನು ಎದುರಿಸಿಕೊಂಡೆ ಘನತೆ ಗೌರವ ಸಾಧಿಸುತ್ತಿದ್ದಾಳೆ ಎಂದರು.

ಸಮಾಜದಲ್ಲಿ ನಿರಂತರ ಶ್ರಮ ಜೀವಿಯಾದ ಗ್ರಾಮೀಣ ಮಹಿಳೆಗೆ ನಿಜವಾದ ಸ್ವಾತಂತ್ರ್ಯ ನೀಡುವುದರ ಮೂಲಕ ಗೌರವ ನೀಡಬೇಕು. ಅದು ಆದರ್ಶ ಸಮಾಜವಾಗಿ ಕಾಣುತ್ತದೆ. ಮಹಿಳಾ ಅಂತರರಾಷ್ಟ್ರೀಯ ದಿನಾಚರಣೆಗೆ ಅರ್ಥ ಕಲ್ಪಿಸಿ ಸಮ ಸಮಾಜ ನಿರ್ಮಾಣವಾಗುತ್ತದೆ. ಇದಕ್ಕೆ ಪೂರ್ವಕವಾಗಿ ಮಣಿಗಯ್ಯ ನವರ ಈ ಕೃತಿ ಹಲವು ಅಯಾಮಗಳಲ್ಲಿ ಮಹಿಳೆಗೆ ಮಾರ್ಗಸೂಚಿಯಾಗುತ್ತದೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ.ನರಸಿಂಹಮೂರ್ತಿ ರವರು ಗ್ರಂಥ ಬಿಡುಗಡೆ ಮಾಡಿ ಅಧುನಿಕ ಕಾಲಘಟ್ಟದಲ್ಲಿ ಕೃತಿ ಬರೆದು ಪ್ರಕಟಿಸುವುದು ಎದೆಗಾರಿಕೆ ವಿಷಯ ಎಂದರೆ ತಪ್ಪಗಲಾರದು. ಅದರಲ್ಲೂ ಮಹಿಳೆಯ ಸಮಸ್ಯೆಗಳು ಕುರಿತು ಅಕರ ಗ್ರಂಥ ರಚಿಸಿರುವುದು ಮಹಿಳಾ ಸಮುದಾಯಕ್ಕೆ ಕೊಟ್ಟ ನೈಜ ಕೊಡುಗೆ ಎಂದು ಬಣ್ಣಿಸಿದರು .

.ಕೃತಿ ಕುರಿತು ಮಾತನಾಡಿದ ಡಾ ರವಿಕುಮಾರ್ ನೀಹರವರು ಮಣಿಗಯ್ಯ ರವರ ಕೃತಿ ಹಲವಾರು ವಿದ್ಯಮಾನಗಳಿಗೆ ಮತ್ತು ಕ್ಷೇತ್ರಗಳಿಗೆ ಉತ್ತರವಾಗಿ ನಿಲುಕ ಬಲ್ಲದು .ಹೆಣ್ಣು ಸಮಾಜಿಕ ವ್ಯವಸ್ಥೆಯೊಳಗೆ ತನಗರಿವಿಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ 75 ರ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಬ್ರಮಿಸಬೇಕೋ ಅಥಾವ ಅತ್ಯಾಚರದ ವಿಷಯಗಳಲ್ಲಿ ಸಂಕಟದ ಭಾಗವಾಗಬೇಕೋ ಎಂಬ ಕಳವಳ ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ ರಚನ ಲಕ್ಷ್ಮೀ ಕಾಂತ್ ರವರು ಮಾತನಾಡುತ್ತಾ ಈ ದೇಶದಲ್ಲಿ ಮಹಿಳೆಗೆ ಪೂಜ್ಯ ಸ್ಥಾನ ನೀಡಲಾಗಿದೆ ಎಂದು ನಂಬಿಸಿ ಶೋಷಣೆ ಮಾಡುತ್ತಿದ್ದಾರೆ ಭ್ರೂಣ ಹತ್ಯ ವರದಕ್ಷಿಣೆ ಹತ್ಯೆ ಲಿಂಗ ತಾರತಮ್ಯ ಮರ್ಯಾದ ಹತ್ಯಗಳೇ ಸಾಕ್ಷಿಯಾಗಿವೆ ಎಂದರು.

ಹೆಣ್ಣು ಜಗದ ಜೀವ ಕಾರಣ್ಯದ ವಸ್ತು ಈ ಮಾತು ಅತಿಶಯೋಕ್ತಿಯಲ್ಲ ಎಂದು ಸಮಾನತೆ ಎಂಬುದು ಮಹಿಳೆ ಪುರಷರ ನಡುವೆ ಇದರು ಅಂತರದ ಮೌಲ್ಯ ಇಂದು ನಮ್ಮ ಮುಂದೆ ಇದೆ ಎಂದು ಸಾಹಿತಿ ಮ.ಲ.ನ ಮೂರ್ತಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಸಿ ಜಿ ಲಕ್ಷ್ಮೀಪತಿ ರವರು ಕೃತಿ ಕುರಿತು ಮಾತನಾಡಿ, ಗುರು ಶಿಷ್ಯ ಪರಂಪರೆಯಲ್ಲಿ ನಮ್ಮ ಗುರುಗಳಾದ ಪ್ರೊ ಮಣಿಗಯ್ಯ ನವರ ಕೃತಿ. ಅವರ ಶಿಷ್ಯನಾಗಿ ಮಾತನಾಡಿವ ಭಾಗ್ಯ ಸಿಕ್ಕಿರುವುದು ನನ್ನ ಭಾಗ್ಯ. ಇಂದಿಗೂ ಮಹಿಳೆಗೆ ಬಡತನ ಕಾರಣಕ್ಕೆ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲ ಮಾಹಿತಿ ಕೃತಿಯಲ್ಲಿ ಅಡಗಿದೆ ಎಂದರು.

ಜನಪದ ಗಾಯಕರಾದ ದೊಡ್ಡಕ್ಕರವರನ್ನು ಸನ್ಮಾನಿಸಿದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ.ಕೆ.ವಿ ಕೃಷ್ಣ ಮೂರ್ತಿ ಸಮಾಜಶಾಸ್ತ್ರಜ್ಞರು ವಹಿಸಿದ್ದರು.ಡಾ ಮುಕುಂದ ಎಲ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ ಹನುಮಂತರಾಯಪ್ಪ ಪಾಲಸಂದ್ರ ಸ್ವಾಗತಿಸಿ ಸುಲೋಚನರವರು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?