ಕ್ರೈಂ

ಬಾರ್ ಸಿಬ್ಬಂದಿಯಿಂದ ಕೊಲೆ

ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಎಸ್ ಎಸ್ ಬಾರ್ ಸಿಬ್ಬಂದಿ ಗ್ರಾಹಕನ್ನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಕೊಲೆ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಐವರು ಕೊಲೆಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಮುಬಾರಕ್ ಎಂಬಾತನನ್ನು ಕೊಲೆ ಮಾಡಿ ಶವ ಎಸೆಯಲಾಗಿತ್ತು.

ಘಟನೆ ಬೆನ್ನು ಹತ್ತಿದ ಪೊಲೀಸರಿಗೆ ಬಾರ್ ಸಿಬ್ಬಂದಿ ಕೊಲೆ ಮಾಡಿರುವುದು ಗೊತ್ತಾಗಿದೆ.

ರಾತ್ರಿ, ಮುಬಾರಕ್ ಅವರು ಬಾರ್ ಗೆ ಕುಡಿಯಲು ಹೋಗಿದ್ದರು. ಆಗ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದರು. ಮಾತಿಗೆ ಮಾತು ಬೆಳೆದು ಐದು ಜನರು ಸೇರಿ ಮುಬಾರಕ್ ಅವರಿಗೆ ಚೆನ್ನಾಗಿ ಥಳಿಸಿ ನಂತರ ಆಯುಧಗಳಿಂದ ತಿವಿದು ಕೊಲೆ ಮಾಡಿದ್ದಾರೆ.

ಕೊಲೆ ಮಾಡಿದ ಬಳಿಕ ಶವವನ್ನು ಬಸ್ ನಿಲ್ದಾಣದಲ್ಲಿ ಬಿಸಾಕಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comment here