ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಶತಮಾನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಒಂದು ಶತಮಾನದ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ ಅವರ ಕುರಿತ ಈ ಕವನವನ್ನು ಡಾ. ರಜನಿ ಬರೆದಿದ್ದಾರೆ.
ದೇಹದ ಕಸುವೆಲ್ಲಾ
ಭುಜಕ್ಕೆ ನುಗ್ಗಿಸಿ
ಚಿಮ್ಮಿಸಿ
ಎದೆಯಲಿ ತುಂಬಿ ಉಸಿರು
ಕಟ್ಟಿ ನೋಡಿ
ಕಣ್ಣಿಟ್ಟು
ಸುತ್ತಿ ಗೆರೆ ಹಿಂದೆ
ರೊಯ್ಯನೆ ಆಕಾಶಕ್ಕೆ
ಗಾಳಿಯಲ್ಲಿ ಹಾರಿ ಹಾರಿ
ಶತ ಶತಮಾನದ ಹಸಿವು
ಶತ ಶತಕೋಟಿ ಜನರ
ಆಸೆ
ಚಂಗನೆ ಹಾರಿ ನುಗ್ಗಿ
ದಾಟಿ ವರ್ತುಲ
ನೆಟ್ಟಿ ನಿಂತು
ದಿನದಿನದ ತಪಸ್ಸು
ಕಣ್ಣಲ್ಲಿ ಗಮ್ಯ
ಗುರಿ
ಇನ್ನೊಂದು ಎಸೆತ
ಶಕ್ತಿ ಬಿಂದುವಾಗಿ
ಬೀಸಿ
ಬಿದ್ದಿದ್ದ ಬೆವರ
ಹನಿಹನಿ
ಹೊನ್ನಿನ ಹೂವು
ಹೊದ್ದಿ ಬಾವುಟ
ನಡೆಯೆ
ರೋಮಾಂಚನ
ಶಂಕೆಯಿಲ್ಲದೆ
ಕಾದಿದ್ದ ಮಾತೆಗೆ
ಚಿನ್ನದ ಗರಿ
ಡಾII ರಜನಿ
Comment here