ತುಮಕೂರು ಲೈವ್

ಲಿಂಗ ಸಮಾನತೆ ಅರಿವು ಇನ್ನೂ ಮೂಡಿಲ್ಲ: ಉಷಾ ಶ್ರೀನಿವಾಸ್ ಆತಂಕ

ತುರುವೇಕೆರೆಯ ಚಿದಂಬರೇಶ್ವರ ಉಚಿತ ಗ್ರಂಥಾಯಲದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಣಸಂದ್ರದ ವೈದ್ಯಾಧಿಕಾರಿ ಡಾ.ಟಿ.ಆರ್.ಕೃತಿ ಮತ್ತು ದಂಡಿನಶಿವರದ ನರ್ಸಿಂಗ್ ಆಫೀಸರ್ ಕೆ.ಎಚ್.ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು ಸಂಸ್ಥಾಪಕರಾದ ಲಲಿತಾ ರಾಮಚಂದ್ರ ದಂಪತಿ,ಲೇಖಕಿ ಉಷಾಶ್ರೀನಿವಾಸ್, ಬರಹಗಾರ ತುರುವೇಕೆರೆ ಪ್ರಸಾದ್, ಉದ್ಯಮಿ ವಿದ್ಯಾಕೃಷ್ಣ ಚಿತ್ರದಲ್ಲಿದ್ದಾರೆ.

Publicstory


Thuruvekere: ಕಳೆದೆರೆಡು ದಶಕಗಳಿಂದ ಸ್ತ್ರೀ ಸಬಲೀಕರಣಕ್ಕೆ ವಿಶೇಷ ಮಹತ್ವ ನೀಡಲಾಗಿದೆಯಾದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ ಕುರಿತು ಸಮಾಧಾನಕರ ಅರಿವು ಮತ್ತು ಜಾಗೃತಿ ಮೂಡಿಲ್ಲ. ಸ್ತ್ರೀ ಸಮುದಾಯ ತನ್ನನ್ನು ತಾನು ಪುನರ್ ರೂಪಿಸಿಕೊಳ್ಳುವ ಮಾದರಿಗಳನ್ನು ಸ್ತ್ರೀ ಸಂವೇದನೆಯ ನೆಲೆಯಲ್ಲೇ ಪರಿಶೋಧಿಸಬೇಕು ಎಂದು ಲೇಖಕಿ ಉಷಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಯಲದ ವತಿಯಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆಯರ ಮೂಲಭೂತ ಶಿಕ್ಷಣ ಕುರಿತ ಕಾರ್ಯಕ್ರಮಗಳಿಗೆ ಅದ್ಯತೆ ನೀಡಬೇಕಿದೆ. ಸಾಂಸ್ಕøತಿಕ ತಿಳುವಳಿಕೆ, ಮನರಂಜನೆಯ ಜೊತೆಗೆ ಮಹಿಳೆಯರ ಆರೋಗ್ಯ ಕುರಿತು ಕಾರ್ಯಕ್ರಮಗಳನ್ನು ರೂಪಿಸಬೇಕು. ಹೆಣ್ಣನ್ನು ವೈಭವೀಕರಿಸಿ ವ್ಯಾಪಾರ ದೃಷ್ಟಿಯಿಂದ ನೋಡುವ ತಂತ್ರಗಳು ಅತಿರೇಕಕ್ಕೆ ಹೋಗದಂತೆ ಸ್ವಯಂ ನಿಯಂತ್ರಣ ಹೊಂದಬೇಕು ಎಂದ ಅವರು ಹಲವು ಮಾಧ್ಯಮಗಳು ದೇಶಕ್ಕೆ ಮಹಿಳೆಯರು ನೀಡಿದ ಕೊಡುಗೆಯ ಬಗ್ಗೆ ಬೆಳಕು ಚೆಲ್ಲದೆ ರೂಢಿಬದ್ದ ಮನೋರಂಜನೆಯ ವಸ್ತುವಾಗಿ ಬಳಸುವುದರ ಬಗ್ಗೆ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬಾಣಸಂದ್ರದ ವೈದ್ಯಾಧಿಕಾರಿ ಡಾ.ಟಿ.ಆರ್.ಕೃತಿ ಮತ್ತು ದಂಡಿನಶಿವರದ ನರ್ಸಿಂಗ್ ಆಫೀಸರ್ ಕೆ.ಎಚ್.ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು.

ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕರಾದ ಲಲಿತಾ ರಾಮಚಂದ್ರ ದಂಪತಿ, ಬರಹಗಾರ ತುರುವೇಕೆರೆ ಪ್ರಸಾದ್, ರಂಗಕರ್ಮಿ ಟಿ.ಎನ್.ಸತೀಶ್, ಸಾಹಿತಿ ಬೋರಲಿಂಗಯ್ಯ, ವಿಠ್ಠಲ ದೀಕ್ಷಿತ್, ಆನಂದ್ ವಾಡೇಕರ್, ರಾಮಕೃಷ್ಣಯ್ಯ, ಉದ್ಯಮಿ ವಿದ್ಯಾಕೃಷ್ಣ, ವಾಸವಿ ಸತೀಶ್, ವಿರೂಪಾಕ್ಷ, ಯೋಗಾನಂದ್ ಇತರರು ಭಾಗವಹಿಸಿದ್ದರು.

Comment here