ಜಸ್ಟ್ ನ್ಯೂಸ್

ಪ್ರೊ.ಪರುಷರಾಮ್ ತುಮಕೂರಿನ ಆಸ್ತಿ

ತುಮಕೂರು: ಪ್ರೊ.ಪರುಷರಾಮ್ ಅವರು ತುಮಕೂರು ವಿ.ವಿಗೆ ಮಾತ್ರವಲ್ಲ ಇಡೀ ತುಮಕೂರು ಜಿಲ್ಲೆಯ ಆಸ್ತಿಯಾಗಿದ್ದಾರೆ ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಮೇಶ್ ಬಣ್ಣಿಸಿದರು.

ನಗರದ ಸುಫಿಯಾ ಕಾಲೇಜಿನಲ್ಲಿ ಶನಿವಾರ ಕಾನೂನು ಕಾಲೇಜಿನ ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ. ಪರುಷರಾಮ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ರಮೇಶ್, ಓಬಯ್ಯ, ಸಿ.ಕೆ.ಮಹೇಂದ್ರ ಇತರರು ಇದ್ದಾರೆ.

ಪರುಷರಾಮ್ ಅವರ ವಿದ್ವತ್ ಅನ್ನು ಜಿಲ್ಲೆಯ ಶೈಕ್ಷಣಿಕ ವಲಯ ಬಳಸಿಕೊಳ್ಳಬೇಕು ಎಂದರು.
ಸುಫಿಯಾ ಕಾಲೇಜು ಹಲವು ಮೈಲುಗಲ್ಲು ಸಾಧಿಸಿದೆ. ಬೋಧಕ ವರ್ಗ ಉತ್ತಮವಾಗಿದೆ. ಇದೇ ಕಾರಣದಿಂದ ಕಾಲೇಜಿನ ವಿದ್ಯಾರ್ಥಿಗಳು ರಾಂಕ್ ಪಡೆಯುತ್ತಿದ್ದಾರೆ ಎಂದರು.

ಅಸಡ್ಡೆಯಿಂದ ಪಾಠ ಮಾಡುತ್ತಾ ಶಿಕ್ಷಕ ವೃತ್ತಿಯ ಪಾವಿತ್ರ್ಯ ಹಾಳು ಮಾಡುವ ಬದಲು ಕೆಲಸ ಬಿಟ್ಟು ಮನೆಗೆ ಹೋಗುವುದು ಒಳಿತು ಎಂದು ತುಮಕೂರು ವಿ.ವಿ. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪೊ. ಪರುಷರಾಮ್ ಹೇಳಿದರು.

ಹೊಸ ಸವಾಲುಗಳನ್ನು ರೂಢಿಸಿಕೊಳ್ಳದಿದ್ದರೆ ಆತ ಒಳ್ಳೆಯ ಶಿಕ್ಷಕನಾಗಲು ಸಾಧ್ಯವೇ ಇಲ್ಲ. ಒಂದು ಗಂಟೆಯ ಪಾಠ ಮಾಡಲು ಮೂರು ಗಂಟೆ ತಯಾರು ಮಾಡಿಕೊಳ್ಳಬೇಕು.
ಅಮಾಯಕ, ಅನಾದರಕ್ಕೆ ಒಳಗಾದ ಕುಟುಂಬಗಳಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರಿಗೆ ಅನ್ಯಾಯ ಮಾಡಬಾರದು ಎಂದು ತಿಳಿ ಹೇಳಿದರು.

ಬೋಧನೆಯಲ್ಲಿ ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕು. ತಮ್ಮದೇ ಆದ ಸಂಶೋಧನಾ ಕಲಿಕಾ ಪ್ರವೃತ್ತಿಯನ್ನು  ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾನೂನು ಕಾಲೇಜಿನ ಪ್ರಾಧ್ಯಾಪಕರಿಗೆ ಅನೇಕ ಸವಾಲುಗಳಿರುತ್ತದೆ. ಪಿಯುಸಿ ನಂತರ, ಪದವಿ ನಂತರದ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಐದು ವರ್ಷದ, ಮೂರು ವರ್ಷದ ಪದವಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಪಾಠ ಮಾಡಬೇಕು ಎಂದರು.

ಕಲಿಕೆಯ ಜತೆಗೆ ಅವಕಾಶಗಳ ಕಡೆಗೂ ವಿದ್ಯಾರ್ಥಿಗಳು ಗಮನ ಹರಿಸುವಂತೆ ಹೇಳಬೇಕು. ಪಠ್ಯ ಬಿಟ್ಟು ಆಚೆಗೆ ವಿಧ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪ   ಪ್ರಾಂಶುಪಾಲ ಟಿ.ಓಬಯ್ಯ, ಸಹ ಪ್ರಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಕಾಲೇಜು ಅಧೀಕ್ಷಕ ಜಗದೀಶ್, ಗ್ರಂಥಪಾಲಕ ಸುಬ್ಬು ಇತರರು ಇದ್ದರು.

Comments (1)

  1. One of a life changing teacher…!! 🙏🙏

Comment here