ಕ್ರೈಂ

ಮುಕ್ತಿಗಾಗಿ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

Publicstory/prajayoga

ಕೊಡಿಗೇನಹಳ್ಳಿ: ತೆಲುಗಿನ ಚಿತ್ರವೊಂದನ್ನು ನೋಡಿ ಪ್ರಭಾವಿತನಾದ ದ್ವಿತೀಯ ಪಿಯುಸಿ ಯುವಕನೋರ್ವ  ನನಗೆ ಮುಕ್ತಿ ಬೇಕೆಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ವಿಕ್ಟೊರಿಯಾ ಆಸ್ಪತೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.

ತಾಲೂಕಿನ ಪುರವರ ಹೋಬಳಿಯ ಗಿಡ್ಡಯ್ಯನಪಾಳ್ಯ ರೇಣುಕಾ ಬಿನ್ ಸಿದ್ದಪ್ಪ (೨೨) ಯುವಕ ಪುರವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ರೇಣುಕಾ ಎಸ್ಸೆಸ್ಸಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಕಾರಣ ಪೋಷಕರು ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ತುಮಕೂರಿನ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಹುಡುಗರ ಜತೆ ಸೇರಿ ಮೂವಿ ಹುಚ್ಚು ಹಾಗೂ ಕಳೆದ ಎರಡೂವರೆ ವರ್ಷದಿಂದ ತುಮಕೂರಿನ ಖಾಸಗಿ ಕಾಲೇಜಿನ ವಿದ್ಯಾಭ್ಯಾಸ ಮಾಡಿತಿದ್ದ. ಮೊಬೈಲ್ ಹುಚ್ಚು ಹಾಗೂ ಸಿನಿಮಾ ಚಟ ಹತ್ತಿಸಿಕೊಂಡಿದ್ದ. ಬದುಕಿಗೆ ಮುಕ್ತಿ ಬೇಕೆಂದು, ಮನಸ್ಸಿನ ಸ್ಥಿಮಿತ ಕಳೆದುಕೊಂಡು ಆತ್ಮ ಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ಅವರ ತಂದೆ ಸಿದ್ದಪ್ಪ ಗೋಳಾಡಿದ್ದಾರೆ.

ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಅದೇ ದಾರಿಯಲ್ಲಿ ಸಂಚರಿಸುತಿದ್ದ ಕರವೇ ಶಿವಕುಮಾರ್ ಕಂಡು ತಕ್ಷಣ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ  ಚಿಕಿತ್ಸೆಕೊಡಿಸಿದ್ದಾರೆ. ಹೆಚ್ಚಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದ ರೇಣುಕಾ ಮೃತಪಟ್ಟಿದ್ದಾನೆ ಎಂದು ತಳಿದು ಬಂದಿದೆ.

Comment here