ರಕ್ತದಾನ ಶಿಬಿರವಿದ್ಯಾ ಸಂಸ್ಥೆ

ನಾಳೆ ಬೆಳಿಗ್ಗೆ ರಕ್ತದಾನ ಶಿಬಿರ

Publicstory/prajayoga

ತುಮಕೂರು: ವಿಶ್ವವಿದ್ಯಾಲಯ ಆವರಣ ಜಗದಾಂಬ ಚಿವುಕುಲ ಬ್ಲಾಕ್ ನಲ್ಲಿ  ನಾಳೆ (ಆ.16. ಮಂಗಳವಾರ) ಬೆಳಿಗ್ಗೆ 9.30ರಿಂದ 4.30ರವರೆಗೆ ರಕ್ತದಾನ ಶಿಬಿರ ನಡೆಯಲಿದೆ.

ಯುವ ರೆಡ್ ಕ್ರಾಸ್ ಘಟಕ, ಎನ್‌ಎಸ್‌ಎಸ್, ಎನ್‌ಸಿಸಿ, ಯೂತ್ ಫಾರ್ ಸೇವಾ ಹಾಗೂ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದೆ.

ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಶಿಬಿರದ  ಉದ್ಘಾಟನೆ ಮಾಡಲಿದ್ದು, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಜಿಲ್ಲಾಸ್ಪತ್ರೆ ರಕ್ತ ನಿಧಿ ವಿಭಾಗದ ಡಾ.ವೀಣಾ ಉಮೇಶ್, ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಕರಿಯಣ್ಣ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.

Comment here