ಪೊಲಿಟಿಕಲ್

ಮಾಧುಸ್ವಾಮಿ ಮತ್ತು ಸುರೇಶ್ ಗೌಡ ಕಾಂಗ್ರೆಸ್‌ಗೆ? ಕೆಎನ್ ರಾಜಣ್ಣ ಸ್ಪೋಟಕ ಹೇಳಿಕೆ

Publicstory/prajayoga

ತುಮಕೂರು: ಸುರೇಶ್ ಗೌಡಂದು ಯಾವುದೋ ಹೈಕೋರ್ಟ್ ನಲ್ಲಿ ಕೇಸ್ ಇದ್ಯಂತಲ್ಲಪ್ಪ. ಆ ಕೇಸ್ ಜಡ್ಜ್‌ಮೆಂಟ್ ಬರೋವರೆಗೆ ನಿರ್ಧಾರ ಮಾಡಲ್ಲ ಅಂತ ಹೇಳಿದ್ದರು. ಇತ್ತೀಚೆಗೆ ಅವರು ನನಗೆ ಸಿಕ್ಕಿಲ್ಲ. ಬದಲಾದ ನಿಲುವೇನಾದರೂ ಇದೆಯೋ ಏನೋ.. ನನಗೆ ಗೊತ್ತಿಲ್ಲ ಎಂದು ಕಾಂಗ್ರಸ್ ಪಕ್ಷ ಸೇರ್ಪಡೆಯ ಕುರಿತು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದರು.

ನಗರದಲ್ಲಿ ನಿನ್ನೆ ಮಾಧುದ್ವಾಮಿಯವರ ಕುರಿತು ರಾಜಣ್ಣ ಆಡಿದ ಮಾತು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು,
ನಾನು ಕಾಂಗ್ರೆಸ್‌ಗೆ ಬರ್ತೀನಿ. ತಿಪಟೂರಿನಲ್ಲಿ ಸೀಟ್ ಕೊಡಿಸಿ ಎಂದು ಮಾಧುಸ್ವಾಮಿಯವರು ಮಂತ್ರಿ ಇದ್ದಾಗ ನನ್ನ ಹತ್ರನೇ ಹೇಳಿದ್ದರು. ಅವರು ಕಾಂಗ್ರೆಸ್ ಗೆ ಬಂದ್ರೆ ಸ್ವಾಗತಿಸುತ್ತೇವೆ ಎಂದು ಕೆ.ಎನ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ.

Comment here