ಪೊಲಿಟಿಕಲ್

ಉತ್ಸವಗಳು ಸಂಬಂಧ ಗಟ್ಟಿಗೊಳಿಸುತ್ತವೆ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ಶಿರಾ: ಧಾರ್ಮಿಕ ನಂಬಿಕೆ ಮತ್ತು ಆಚಾರ ವಿಚಾರಗಳು ಭಕ್ತಿಯ ಮೆರಗು ಹೆಚ್ಚಿಸುತ್ತವೆ. ಇಂತಹ ಉತ್ಸವಗಳು ಗ್ರಾಮಗಳಲ್ಲಿ ಜನರ ಸ್ನೇಹ ಸಂಬಂಧ ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ತಾಲೂಕಿನ ಹುಲಿಕುಂಟೆ ಹೋಬಳಿಯ ತಡಕಲೂರು ದಿಬ್ಬದ ಹಟ್ಟಿ ಗೊಲ್ಲರಹಟ್ಟಿಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಕೃಷ್ಣ ಉತ್ಸವ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಗವಾನ್ ಶ್ರೀ ಕೃಷ್ಣ, ನಾರಾಯಣನ 8ನೇ ಅವತಾರವಾಗಿ ಜನಿಸಿ ಜಗತ್ತಿನ ರಕ್ಷಕನಾಗಿ ಮನುಕುಲಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಸನ್ಮಾರ್ಗದ ರೀತಿಯನ್ನು ಈ ಜಗತ್ತಿಗೆ ಭಗವದ್ಗೀತೆ ಮೂಲಕ ತಿಳಿಸಿದ್ದಾರೆ ಎಂದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರಕಾಶ್ ಗೌಡ್ರು,ಗ್ರಾಮ ಪಂಚಾಯಿತಿ ಸದಸ್ಯ ರವಿ, ಶಿವಣ್ಣ, ಬಸವರಾಜಣ್ಣ,ಶಿವಕುಮಾರ್,ಹಾಡ್ವೇðರ್ ಮಂಜುನಾಥ್, ರಾಜು ಹಾಗೂ ಅನೇಕ ಮುಖಂಡರು ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.

Comment here