ಸಂಘ ಸಂಸ್ಥೆ

ಗೈರಾದ ಪದಾಧಿಕಾರಿಗಳ ವಜಾ ಮಾಡಿ : ಕೆ.ಎಸ್.ಸಿದ್ದಲಿಂಗಪ್ಪ

Publicstory/prajayoga

ಕುಣಿಗಲ್ : ಕಾರಣ ನೀಡದೇ ಸತತವಾಗಿ ಮೂರು ಭಾರಿ ಸಭೆಗೆ ಗೈರು ಹಾಗುವ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ವಜಾಗೊಳಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಾಲೂಕು ಕಸಾಪ ಅಧ್ಯಕ್ಷರಿಗೆ ಸೂಚಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ಕಸಾಪ ಸಂಘದ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿಗೆ ಕಸಾಪ ರಾಜ್ಯ ಕೇಂದ್ರ ಸಮಿತಿ ಕೆಲವು ಮಹತ್ವರವಾದ ಕ್ರಮವನ್ನು ಕೈಗೊಂಡಿದೆ. ಅದಕ್ಕೆ ಅನುಗುಣವಾಗಿ ಜಿಲ್ಲಾ ಹಾಗೂ ತಾಲೂಕು ಕಸಾಪ ಘಟಕಗಳು ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಕಸಾಪ ಅಧ್ಯಕ್ಷರು ಪದಾಧಿಕಾರಿಗಳ ಸಭೆ ಕರೆದು ಕನ್ನಡ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಅದನ್ನು ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಕಾರ್ಯಕಾರಿ ಸಮಿತಿ ನಿರ್ವಹಿಸಬೇಕು. ಸಭೆಗೆ ಕಾರಣ ನೀಡದೇ ಸತತವಾಗಿ ಮೂರು ಬಾರಿ ಸಭೆಗೆ ಗೈರಾಗುವ ಪದಾಧಿಕಾರಿಗಳಿಗೆ ನೋಟಿಸ್ ನೀಡದೇ ವಜಾ ಗೊಳಿಸಿ. ವಜಾಗೊಂಡ ಸ್ಥಾನಕ್ಕೆ ಅದೇ ಸಮುದಾಯದವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈಗಿರುವ ಆಡಳಿತ ಮಂಡಲಿಯ ಪದಾಧಿಕಾರಿಗಳ ಜತೆಗೆ ಹೊಸದಾಗಿ ಸಂಘಟನಾ ಕಾರ್ಯದರ್ಶಿ, ಸಹಾ ಸಂಘಟನಾ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ವಿವಿಧ ಸಂಘ, ಸಂಸ್ಥೆಗಳ ಐದು ಮಂದಿಯನ್ನು ಹೊಸದಾಗಿ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳಬೇಕು. ಪರಿಷತ್ ಗೆ ಮಾರ್ಗದರ್ಶನ ಮಾಡಲು ಮಾರ್ಗದರ್ಶಿ ಸಮಿತಿ ರಚಿಸಿ, ವಿವಿಧ ವರ್ಗಗಳ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಕನ್ನಡ ಕೆಲಸಗಳನ್ನು ಹೆಚ್ಚು ಹೆಚ್ಚಾಗಿ ಮಾಡಬೇಕು ಎಂದು ತಿಳಿಸಿದರು.

ಸದಸ್ಯತ್ವಕ್ಕೆ ಒತ್ತು ನೀಡಿ : ಕಸಾಪ ಜನ ಸಾಮಾನ್ಯರ ಪರಿಷತ್ನಾಗಿಸಲು ರಾಜ್ಯದಲ್ಲಿ ಒಂದು ಕೋಟಿ ಸದಸ್ಯರನ್ನಾಗಿ ಮಾಡಲು ರಾಜ್ಯ ಘಟಕ ಕಾರ್ಯಾನ್ಮುಖವಾಗಿದೆ ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸದಸ್ಯತ್ವದ ಅಭಿಯಾನ ನಡೆಸಿ ಇಗಿರುವ ಸದಸ್ಯರ ಜತೆಗೆ ಹೊಸ ಸದಸ್ಯರನ್ನು ನೊಂದಣಿ ಮಾಡಿಕೊಳ್ಳಬೇಕು.
ಕಸಾಪಗೆ ಸದಸ್ಯತ್ವ ನೊಂದಾಯಿಸಿಕೊಳ್ಳುವ ಸೈನಿಕರು, ಅರೆ ಸೈನಿಕರು, ನಿವೃತ್ತ ಸೈನಿಕರಿಗೆ ಶುಲ್ಕವಿಲ್ಲದೆ ಉಚಿತ ಸದಸ್ಯತ್ವ ಮತ್ತು ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಆನ್ಲೈನ್ ಮೂಲಕ ಸದಸ್ಯತ್ವ ಒದಗಿಸಲು ನೂತನ ಆಪ್ ಅಳವಡಿಸಲಾಗಿದೆ. ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ರೈತರಿಗೆ ಯಾವುದೇ ವಿದ್ಯಾರ್ಥಿ ಅರ್ಹತೆ ಅನ್ವಯಿಸುವುದಿಲ್ಲ. ಆದರೆ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದೃಢೀಕರಣ ಪತ್ರ ಪಡೆದು ಸದಸ್ಯತ್ವ ಪಡೆಯಬಹುದ್ದಾಗಿದೆ. ಇತರೆಯವರು ಸದಸ್ಯರಾಗಲು ಏಳನೇ ತರಗತಿ ಕಡ್ಡಾಯವಾಗಿದೆ. ಈಗಿರುವ ಒಂದು ಸಾವಿರ ಸದಸ್ಯತ್ವ ಶುಲ್ಕ 500 ಮತ್ತು ಕನ್ನಡ ನುಡಿ ಶುಲ್ಕ 500 ರೂ. ಗಳಿಂದ 259 ರೂಗಳಿಗೆ ಇಳಿಸಿ ಅಧುನಿಕ ಗುರುತಿನ ಚೀಟಿಯಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲು 150 ರೂ. ಶುಲ್ಕವನ್ನು ಸದಸ್ಯರು ಕಟ್ಟಬೇಕಾಗಿದೆ. ಈ ದಿಸೆಯಲ್ಲಿ ಕುಣಿಗಲ್ ತಾಲೂಕಿನಲ್ಲಿ ಕನಿಷ್ಠ ಐದು ಸಾವಿರ ಮಂದಿ ಜನರನ್ನು ಕಸಾಪಗೆ ನೊಂದಾಯಿಸಬೇಕೆಂದು ತಿಳಿಸಿದರು.

ಜಿಲ್ಲಾ ಕಸಪಾ ಘಟಕದಿಂದ ಕುಣಿಗಲ್ ತಾಲೂಕು ಕಸಾಪ ಘಟಕಕ್ಕೆ ದತ್ತಿ ನಿಧಿ, ಕಸಾಪ ಸಂಸ್ಥಾಪಕ ದಿನಾಚರಣೆಯ 6500 ರೂ ಚೆಕ್ಅನ್ನು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನೀಡಿದರು.

ಈ ವೇಳೆ ಕಸಾಪ ಜಿಲ್ಲಾ ಕಾರ್ಯದರ್ಶಿ ಯೋಗೀಶ್ವರಪ್ಪ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ತಾಲೂಕು ಅಧ್ಯಕ್ಷ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ್, ಪ್ರಧಾನ ಕಾರ್ಯದರ್ಶಿ ಜಯರಾಮ್, ಕೋಶಾಧ್ಯಕ್ಷ ರಾಮಣ್ಣ, ನಿರ್ದೇಶಕರಾದ ಕೆ.ಆರ್.ರಂಗನಾಥ್, ಕೆ.ಎನ್.ಲೋಕೇಶ್, ದಲಿತ್ನಾರಾಯಣ್, ಲೀಲಾವತಿ, ಜೀವಂಧರ್ಕುಮಾರ್, ಎಂ.ಡಿ.ಮೋಹನ್, ಷರೀಪ್ಉಲ್ಲಾ, ಪ್ರೀತಮ್ಡೇವಿಡ್, ನಳಿನಾಕೃಷ್ಣಪ್ಪ, ಎಡಿಯೂರು ಘಟಕದ ಅಧ್ಯಕ್ಷ ಶಿವಕುಮಾರ್ ಇದ್ದರು.

Comment here