ಪೊಲಿಟಿಕಲ್

ಮನೆ ಕಳೆದುಕೊಂಡ ಹೆತ್ತೇನಹಳ್ಳಿ ಸಂತ್ರಸ್ತರಿಗೆ ಜೆಡಿಎಸ್ ನೆರವು

Publicstory/prajayoga

ತುಮಕೂರು : ಗ್ರಾಮಾಂತರದ ಹೆತ್ತೇನಹಳ್ಳಿ ಗ್ರಾಮದಲ್ಲಿ ಸುಮಾರು ಏಳು ಮನೆಗಳು ನೆಲಕ್ಕುರುಳಿದ್ದು, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಶನಿವಾರ ಪಾಲನೇತ್ರಯ್ಯ ಸಾಂತ್ವಾನ ಹೇಳಿ ಪ್ರತಿ ಕುಟುಂಬಕ್ಕೆ ತಲಾ 60,000 ರೂಪಾಯಿ ಹಣ ಸಹಾಯ ಮಾಡಿದರು.

ಶಾಸಕ ಡಿ.ಸಿ ಗೌರಿಶಂಕರ್ ಅವರು ತಕ್ಷಣವೇ ಜನರ ನೆರವಿಗೆ ಬರುವಂತೆ ಗೂಳೂರು ಜಿಲ್ಲಾ ಪಂಚಾಯತಿ ಜೆಡಿಎಸ್ ಉಸ್ತುವಾರಿ ಪಾಲನೇತ್ರಯ್ಯ ಅವರಿಗೆ ಸೂಚಿಸಿದ ಹಿನ್ನಲೆಯಲ್ಲಿ ಪಾಲನೇತ್ರಯ್ಯ ಮುತುವರ್ಜಿ ವಹಿಸಿಕೊಂಡರು.

ಮನೆ ಕಳೆದುಕೊಂಡವರಿಗೆ ವೈಯಕ್ತಿಕ ಹಣದಲ್ಲಿ ಮನೆಗೆ ಮೇಲ್ಛಾವಣಿ ನೀಡುವುದಾಗಿ ಸಂತ್ರಸ್ತರಿಗೆ ಧೈರ್ಯ ನೀಡಿದ್ದಾರೆ.

ಈ ವೇಳೆ ಮುಖಂಡ ರಾಜಣ್ಣ, ರವೀಶ್, ಮಂಜುನಾಥ್, ಮೋಹನ್, ಮಾಯಣ್ಣ, ಹನುಮಂತರಾಯಪ್ಪ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Comment here