ಕ್ರೈಂ

ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

Publicstory. Prajayoga

ಪಾವಗಡ: ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದ ತೋಟದಲ್ಲಿ ಹೈ ಟೆನ್ಶನ್ ವೈರ್ (ವಿದ್ಯುತ್ ತಂತಿ) ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ರಮೇಶ್ ಬೆಳಿಗ್ಗೆ ತೋಟದಲ್ಲಿ ಸೀತಾಫಲ ಹಣ್ಣನ್ನು ಕೀಳಲು ಹೋಗಿದ್ದು, ವಿದ್ಯುತ್ ತಂತಿ   ತುಳಿದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೆಂಕಟರಮಣಪ್ಪ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ತಿಮ್ಮರಾಯಪ್ಪ ಅವರೂ ಭೇಟಿ ನೀಡಿದರು. ಈವೇಳೆ  ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದರು.
ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Comment here