ಕ್ರೈಂ

ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ; ಶಾಸಕ ವೆಂಕಟರಮಣಪ್ಪ ಸ್ಥಳಕ್ಕೆ ಭೇಟಿ

Publicstory/prajayoga

ವರದಿ- ಶ್ರೀನಿವಾಸಲು

ಪಾವಗಡ: ತಾಲೂಕಿನ ಬ್ಯಾಡನೂರಿನ ಗ್ರಾಮದ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಮೃತ ದುರ್ದೈವಿ ದೇವೀರಮ್ಮ (35) ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಮಹಿಳೆಯರು ಹಳ್ಳದ ಬಳಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಬ್ಯಾಡನೂರು ಗ್ರಾಮದ ಗೋವಿಂದಪ್ಪ ಅವರ ಪತ್ನಿ ದೇವಿರಮ್ಮ ನೀರಿನಲ್ಲಿ ಕೊಚ್ಚಿ ಹೋದರು ಎಂದು ಆಕೆ ಜೊತೆ ಬಟ್ಟೆ ತೊಳೆಯಲು ತೆರಳಿದ್ದ (ಸಂಬಂಧಿ) ರಕ್ಷಿತಾ ತಿಳಿಸಿದ್ದಾರೆ.

ತಾವು ಬಟ್ಟೆ ಒಗೆಯಲು ಬೆಳಿಗ್ಗೆ ಹಳ್ಳಕ್ಕೆ ಹೋಗಿದ್ದೆವು. ಈ ಸಂದರ್ಭದಲ್ಲಿ ದೇವಿರಮ್ಮ ಕಾಲು ಜಾರಿ ಹಳ್ಳಕ್ಕೆ ಬಿದ್ದರು. ಅವರನ್ನು ಕಾಪಾಡುವ ಪ್ರಯತ್ನದಲ್ಲಿ ತಾನೂ ನೀರಿನಲ್ಲಿ ಮುಳುಗಿದೆ. ತನ್ನ ಸಹೋದರ ತಕ್ಷಣ ಬಂದು ತನ್ನನ್ನು ಕಾಪಾಡಿದ. ಅಷ್ಟರಲ್ಲಿ ದೇವಿರಮ್ಮ ನೀರಿನಲ್ಲಿ ಕೊಚ್ಚಿ ಹೋಗಿದರು ಎಂದು ರಕ್ಷಿತಾ ಅವರು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ಶಾಸಕ ವೆಂಕಟರಮಣಪ್ಪ, ಬೇಗ ಕಾರ್ಯಚರಣೆ ಮುಂದುವರಿಸುವಂತೆ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದರು.

ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಅಲ್ಲದೆ, ಹಳ್ಳದಲ್ಲಿ ಸೀಮೆ ಜಾಲಿ ಗಿಡಗಳು ಯಥೇಚ್ಛವಾಗಿ ಇರುವುದರಿಂದ  ಕಾರ್ಯಾಚರಣೆ ವಿಳಂಬವಾಗಿದೆ ಎಂದು ತಾಲೂಕು ಅಗ್ನಿ ಶಾಮಕದಳದ ಅಧಿಕಾರಿ ತಿಳಿಸಿದ್ದು, ಮುಂದಿನ ಕಾರ್ಯಾಚರಣೆಗಾಗಿ ತುಮಕೂರಿನಿಂದ ಎನ್ ಡಿ ಆರ್ ಎಫ್ ಶೋಧನಾ ಕಾರ್ಯಕ್ಕೆ ಬರುವುದಾಗಿ ತಿಳಿಸಿದರು.

ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೊಚ್ಚಿಹೋದ ಮಹಿಳೆಯ ಶೋಧ ಕಾರ್ಯಕ್ಕೆ ಅಗತ್ಯ ನೆರವು ನೀಡುವ ಪ್ರಯತ್ನ ಮಾಡಿದರು. ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಹಳ್ಳದ ಹತ್ತಿರ ಆಗಮಿಸಿದ್ದರು. ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಕಂದಾಯ ಅಧಿಕಾರಿ ರಾಜಗೋಪಾಲ್, ಅಗ್ನಿಶಾಮಕ ದಳದ ಠಾಣಾಧಿಕಾರಿ, ಎಸ್ಆರ್ ಪಾಟೀಲ್, ಮುಂತಾದವರು ಆಗಮಿಸಿದ್ದರು.

Comment here