ಕ್ರೈಂ

ಹೂವಿನ ಕುಂಡಗಳಲ್ಲಿ ಗಾಂಜಾ ಬೆಳೆ: ಆರೋಪಿ ಬಂಧನ

Publicstory/prajayoga

ವರದಿ- ದೇವರಾಜ್ ಗುಬ್ಬಿ

ಗುಬ್ಬಿ: ಪಟ್ಟಣದ ಜ್ಯೋತಿನಗರ ಬಡಾವಣೆಯ ಮನೆಯೊಂದರ ಎರಡು ಹೂವಿನ ಕುಂಡಗಳಲ್ಲಿ ಗಾಂಜಾ ಬೆಳದಿದ್ದ ಆರೋಪಿಯನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿ ನಗರ ನಿವಾಸಿ ಆಟೋ ಚಾಲಕ ಗಫರ್ ಅಲಿಖಾನ್ (42) ಬಂಧಿತ ಆರೋಪಿ.
ಈತ ತನ್ನ ಮನೆಯ ಹೂವಿನ ಕುಂಡಗಳ ಮಧ್ಯೆ ಗಾಂಜಾ  ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮನೆಯನ್ನು ಪರಿಶೀಲನೆ ನಡೆಸಿದಾಗ ಎರಡು ಹೂವಿನ ಕುಂಡಗಳಲ್ಲಿ  ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದ್ದು, ಗುಬ್ಬಿ ಮತ್ತು ಚೇಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾಲು ವಶಪಡಿಸಿದ್ದಾರೆ.

ಸ್ಥಳಕ್ಕೆ ಗುಬ್ಬಿ ತಹಶೀಲ್ದಾರ್ ಬಿ.ಆರತಿ ಆಗಮಿಸಿ ಮಹಜರ್ ನಡೆಸಿದರು.

ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವ ಗುಬ್ಬಿ ಪೊಲೀಸರು,  ಪಿಎಸ್ಐ ಮುತ್ತುರಾಜ್ ಮತ್ತು ಚೇಳೂರು ಪಿಎಸ್ಐ ನವೀನ್ ಕುಮಾರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಹದೇವಯ್ಯ,  ನವೀನ್, ರಂಗನಾಥ್, ಮಧುಸೂದನ್ ಮತ್ತು ದೇವರಾಜ್ ಕಾರ್ಯನಿರ್ವಹಿಸಿದ್ದಾರೆ.

Comment here