ಅಪಘಾತ, ಅವಘಡ, ಆಕಸ್ಮಿಕ

ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತ ದೇಹ ಪತ್ತೆ

Publicstory/prajayoga

ವರದಿ- ಶ್ರೀನಿವಾಸಲು

ಪಾವಗಡ:  ಅಗ್ನಿಶಾಮಕ ದಳ ನಿರಂತರ ಕಾರ್ಯಾಚರಣೆಯಿಂದ ಬೆಳಿಗ್ಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬ್ಯಾಡನೂರು ಗ್ರಾಮದ ಮಹಿಳೆಯ ದೇವೀರಮ್ಮನ ಮೃತ ದೇಹವನ್ನು ಪತ್ತೆ ಹಚ್ಚಲಾಗಿದೆ.

ಮೃತ ದೇಹವನ್ನು ಹೊರ ತೆಗೆದ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ದುರ್ದೈವಿ ದೇವೀರಮ್ಮ (35) ಇಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಮಹಿಳೆಯರು ಹಳ್ಳದ ಬಳಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೊಚ್ಚಿಹೋದ ಮಹಿಳೆಯ ಶೋಧ ಕಾರ್ಯಕ್ಕೆ ಅಗತ್ಯ ನೆರವು ನೀಡುವ ಪ್ರಯತ್ನ ಮಾಡಿದ್ದರು. ತುಮಕೂರಿನಿಂದ ಬಂದ ಅಗ್ನಿಶಾಮಕ ದಳ ಶೋಧನಾ ತಂಡದ ನಿರಂತರ ಹುಡುಕಾಟದ ಫಲವಾಗಿ ಮೃತ ದೇಹ ಪತ್ತೆಯಾಗಿದೆ.

Comment here