ಪೊಲಿಟಿಕಲ್

ಜನೋತ್ಸವ ದಿಢೀರ್ ರದ್ದು : ಸಿಎಂ ಹೇಳಿದ್ದೇನು?


ಮಂಗಳೂರಿನ ಬಿಜೆಪಿ ಕಾರ್ಯಕರ್ತ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು  ರದ್ದುಗೊಳಿಸಿರುವುದಾಗಿ ಸಿಎಂ ಬೊಮ್ಮಾಯಿ ನಿನ್ನೆ ತಡರಾತ್ರಿ ಪ್ರಕಟಿಸಿದ್ದಾರೆ.

ಬೆಂಗಳೂರಿನ ಆರ್‌ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆಯ ವಿಷಯ ತಿಳಿದಾಗ  ಬಹಳ ಸಂಕಟವಾಯಿತು. ಅಮಾಯಕನೊಬ್ಬನನ್ನು ಯೋಜನಾ ಬದ್ಧವಾಗಿ ಕೊಲೆ ಮಾಡಿರುವುದು ಅಮಾನವೀಯ. ಹರ್ಷನ ಕೊಲೆಯಾದ ಕೆಲವೇ ದಿನಗಳಲ್ಲಿ ಈ ಪ್ರಕರಣ ನಡೆದಿರುವುದು ನೋವುಂಟು ಮಾಡಿದೆ. ಜನೋತ್ಸವ ಕಾರ್ಯಕ್ರಮದ ಜೊತೆಗೆ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮವನ್ನೂ ರದ್ದು ಮಾಡಿದ್ದೇವೆ.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇರಳ ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಆ್ಯಂಟಿ ಟೆರರಿಸ್ಟ್ ಕಮಾಂಡೋ ಪಡೆಯನ್ನು ರಚನೆ ಮಾಡಲಾಗುವುದು ಎಂದರು.

ನಮಗೆ ನನ್ನ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮತ್ತು ಪ್ರತಿಯೊಬ್ಬ ಪ್ರಜೆಯ ಜೀವ ಮುಖ್ಯ. ಅಮಾಯಕರ ಜೀವ ಪಡೆಯುವವರ ಪಾಪದ ಕೊಡ ತುಂಬಿದೆ. ಇಂಥವರನ್ನು ಮಟ್ಟ ಹಾಕುವ ಶಕ್ತಿ ನಮಗಿದ್ದು, ಕಠಿಣ ಕ್ರಮ ಕೈಗೊಳ್ಳುತ್ತೇವೆ.  ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಎಲ್ಲಾ ರಾಜ್ಯಗಳ ಒಪ್ಪಿಗೆ ಪಡೆದು ತೀರ್ಮಾನಿಸಲಾಗುವುದು ಎಂದರು.

Comment here