ಭಾನುವಾರದ ಕವಿತೆ

ಭಾನುವಾರದ ಕವಿತೆ: ಮಳೆ

ಮಳೆಯನ್ನು ರೂಪಕವಾಗಿಸಿಕೊಂಡು ಬದುಕಿನ ಭಾವ, ಸಂಕಷ್ಟಗಳ ಸಂಕೀರ್ಣತೆಯನ್ನು ಈ ಕವಿತೆ ಹೇಳುತ್ತದೆ. ಮಳೆಯ ಸೊಬಗು ಒಬ್ಬೊಬ್ಬರಿಗೆ ಒಂದೊಂದು ತೆರೆನಾದ ಸುಖ,‌ಕಷ್ಟಗಳನ್ನು ಕರುಣಿಸುತ್ತದೆ. ಒಬ್ಬರಿಗೆ ಸುಖವಾದದ್ದು, ಮತ್ತೊಬ್ಬರಿಗೆ ದುಂಖವೂ ಆಗಬಹುದು. ಮಳೆ ನಿಂತ ಮೇಲೆ ಸಿಗುವಂತ ನಿರಾಳತೆ ದುಂಖದ ಬಳಿಕವೂ ಸಿಗಲಿದೆ ಎಂಬುದನ್ನು ಕವನ ಹೇಳುತ್ತದೆ.ಮಳೆ,🏝


ಇಳೆಯ ಕೊಳೆ ..
ತೊಳೆಯೊ ಮಳೆ

ಮೆಲ್ಲಗೆ ಜಿನುಗಿ ಇಂಗಿ ..
ಹೀರಿ ಒದ್ದೆ

ಪಟ್ಟು ಬಿಡದೆ ಸುರಿದು..
ಹರಿದು

ಭೂಮಿ ಸದ್ದಿಲ್ಲದೆ ಹೀರಿ..
ಕರೆಂಟ್ ವೈರುಗಳಿಗೆ ಮುತ್ತು

ತಾರಸಿಯಿಂದ ಇಳಿಯೇ..
ಸೋಮಾರಿ

ಕಾರಿನ ಅಚೆ ಕಾಣಿಸದ ರಸ್ತೆ..
ಒಳಗೆ ಮೋಡ ಹಬೆ

ಗಾಜಿನ ಮೇಲೆ ..
ಮುಟ್ಟಲಾಗದ ಹನಿ ಗೆರೆ ಚಿತ್ತಾರ

ಕರಿ ಮುಗಿಲು..
ಕಡಲನ್ನು ಕುಡಿದ ಕಣಜ

ಎಲ್ಲೋ ಕಣ್ಣೀರ ಹನಿ..
ಬಿಸಿ ಬಜ್ಜಿಗೆ ಸಾಲು

ಸರ್ರನೆ ಹರಿದ ಕಾರು..
ಹಾರಿಸಿ ಕೊಚ್ಚೆ

ಮನದಲ್ಲಿ ಮಿಡಿದ ಕವನ..
ಮಳೆ ನೀರನ್ನು ಒದರಿದ ಬೀದಿನಾಯಿ

ಒದ್ದೆ ಬಟ್ಟೆ..
ಓಡಿ ದಾಟಿದ ಹೊಸಿಲು

ಬಟ್ಟೆ ಬದಲಿಸಿ…
ಬೆಚ್ಚನೆ ಸೋಫಾ

ಮುಖಕ್ಕೆ ಟವಲ್ ಸುತ್ತಿ…
ಕರೆ ತಂದ ಮಗುವಿಗೆ ಜ್ವರ

ಗರಿಗಳ ಮೇಲಿನ…
ಟಪ್ ಟಪ್

ಬಿದ್ದ ಹನಿ ಹನಿಗೂ..
ಅಲ್ಲಾಡುವ ಎಲೆ

ಕಾದು ತಾನು ತೊಟ್ಟಿಕ್ಕಲು..
ನೆನೆದ ಮರ

ಬೆಳಗ್ಗೆ ಶುಭ್ರ ಮುಗಿಲು..
ತಣ್ಣಗಾದ ನೆಲ

Comment here