ತುಮಕೂರು ಲೈವ್

ದ್ವಿತೀಯ ಪಿಯು : ಶೇಷಾದ್ರಿಪುರಂ ಕಾಲೇಜಿಗೆ ಹೆಚ್ಚು ಡಿಸ್ಟಿಂಕ್ಷನ್

ತುಮಕೂರು: ನಗರದ ಶೇಷಾದ್ರಿ ‌ಪುರಂ‌ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮೆರೆದಿದೆ.

ಉತ್ತಮ, ಗುಣಮಟ್ಟದ ಶಿಕ್ಷಣಕ್ಕೆ ನಗರದಲ್ಲಿ ಹೆಸರುವಾಸಿಯಾಗಿರುವ ಶೇಷಾದ್ರಿಪುರಂ‌ ಶಿಕ್ಷಣ ಸಂಸ್ಥೆಯು ಈ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜಿನ 114 ವಿದ್ಯಾರ್ಥಿಗಳು ಡಿಸ್ಟಿಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ ಎಂದು‌ ಪ್ರಾಂಶುಪಾಲರಾದ‌ ಬಿ.ವಿ.ಬಸವರಾಜು ಅವರು ತಿಳಿಸಿದ್ದಾರೆ.

317‌‌ ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ, ವಾಣಿಜ್ಯ ವಿಭಾಗ, ಈ ಎರಡೂ ವಿಭಾಗಳಲ್ಲಿ ಅದ್ವಿತೀಯ ಸಾಧನೆ ತೋರಲಾಗಿದೆ.‌ಕಳೆದ ವರ್ಷವೂ ಕಾಲೇಜು ಫಲಿತಾಂಶದಲ್ಲಿ ಸಾಧನೆ ಮೆರೆದಿತ್ತು ಎಂದು ಹೇಳಿದರು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯ‌ದರ್ಶಿಗಳಾದ‌ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶೈಕ್ಷಣಿಕ‌ ಸಂಸ್ಥೆ ಅನೇಕ ಹೆಗ್ಗಳಿಕೆಯನ್ನು ಹೊಂದಿದೆ. ನೈತಿಕ ಶಿಕ್ಷಣದ ವಿಷಯದಲ್ಲೂ ಕಾಲೇಜು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ.‌ ಇದು ಕಾಲೇಜಿನ ಹೆಗ್ಗಳಿಕೆ ಎನಿಸಿದೆ.

ಪ್ರತಿ‌ವರ್ಷ ಇಲ್ಲಿನ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಸರ್ಕಾರಿ ಕೋಟಾದ ಸೀಟು ಪಡೆದು ಕೊಳ್ಳುತ್ತಿದ್ದಾರೆ. ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿನ ದೇಗುಲವಾಗಿದೆ. ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಶೇಷಾದ್ರಿಪುರಂ
ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Comment here