ಕವನ

ನವರಾತ್ರಿ ಕವನಗಳು: ಗುಲಾಬಿ ಬಣ್ಣ

ನವರಾತ್ರಿಯ 8ನೇ ದಿನ ಮಹಾ ಗೌರಿಯನ್ನು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವನ್ನು ಮಹಾಗೌರಿ ಪ್ರತಿನಿಧಿಸುತ್ತಾಳೆ. ಗುಲಾಬಿ ಬಣ್ಣ ಯಾರಿಗೆ ಇಷ್ಟವಿಲ್ಲ. ಗುಲಾಬಿ ಬಣ್ಣದೊಂದಿಗೆ ಬದುಕು ಹಾಸುಹೊಕ್ಕಾಗಿರುವುದನ್ನು ಡಾ. ರಜನಿ ಅವರ ಈ ಕವನ ಸಾರುತ್ತದೆ.


ಗುಲಾಬಿ ಬಣ್ಣ
***********

ಎಳೆ ಕಂದನ
ತುಟಿ..
ಅಂಗಾಲು

ಪುಟ್ಟಿಯ
ನೆರಿಗೆ
ಫ್ರಾಕು

ಕೆಸರಿನಲ್ಲಿ
ಅರಳಿದ
ಕಮಲ

ರಕ್ತ
ಚಿಮ್ಮುವ
ಉಗುರು

ಆಗ ತಾನೆ
ಜನಿಸಿದ
ಮರಿ ಹಂದಿ

ಪ್ರೀತಿ
ತುಂಬಿದ
Valentine
ಹೃದಯ

ಪ್ರೀತಿ,
ಎಳೆ ಚಿಗುರು,
ಹುಡುಗಿಗೇ ಏಕೆ…?
ಗುಲಾಬಿ ಬಣ್ಣ

ಕೆಂಪು ಬಿಳಿಗಳ
ಮಿಶ್ರಣ
ಗುಲಾಬಿ

ಗುಲಾಬಿ
ಶುದ್ಧ
ಪ್ರೀತಿಯ ಬಣ್ಣ

ಅಮ್ಮನ
ಗುಲಾಬಿ ರೇಶ್ಮೆ
ಸೀರೆ

ಗುಲಾಬಿ
ರಿಬ್ಬನ್
Breast Cancer
ಅರಿವಿಗಾಗಿ


ಡಾII ರಜನಿ

Comment here