ಸಾಹಿತ್ಯ ಸಂವಾದ

ನಮ್ದೂ ಒಂದು ಬಾಳು…!

ಮಹೇಂದ್ರ ಕೃಷ್ಣಮೂರ್ತಿ


ದಲಿತ ಸಂವೇದನೆಗಳಷ್ಟೇ ಅಲ್ಲದೇ ಅಹಿಂದ‌ ಜಾತಿಗಳ ಜನರ ಬದುಕಿನ ನೋವಿನ ದನಿಯಾಗಿ ಸಾಹಿತ್ಯಲೋಕದಲ್ಲಿ ಹೊಸ ಛಾಪು ಮೂಡಿಸುತ್ತಿರುವ ಡಾ.ಓ.ನಾಗರಾಜ್ ಅವರ ನೀಳ್ಗತೆಗಳ ಸಂಗ್ರಹವೇ ನಮ್ದೂ ಬಂದು ಬಾಳು.

ಹೆಸರೇ ಸೂಚಿಸುವಂತೆ ಇದೊಂದು ನೋವುಂಡವರ ಕಥನ. ಸಾಮಾನ್ಯವಾಗಿ ನಮ್ದೂ ಒಂದು ಬಾಳೇ ಎಂಬ ಎದೆಯಾಳದ ನೋವಿನ ದನಿ, ಆಕ್ರೋಶ ಬರುವುದು ಬಡವರ ಬಾಯಿಂದಲೇ.

ನಾವೆಲ್ಲ ಸೇರಿ ತುಮಕೂರು ಜಿಲ್ಲೆಯ ಬಂಜರು ಬರಡು ಮಾಡಿರುವ ಕೃಷ್ಣಾ ಕೊಳ್ಳದ ಜನ ಜೀವನದ ನಾಡಿಯಾಗಿ ಇಲ್ಲಿಯ ಕಥೆಗಳು ಮೂಡಿವೆ.

ಸಾಮಾನ್ಯವಾಗಿ ನಾಗರಾಜ್, ತಮ್ಮ ಬದುಕಿನ ನೆಲೆಯಿಂದಲೇ ಕಥೆಗಳನ್ನು ಹೆಕ್ಕುತ್ತಾರೆ. ಹಾಗಾಗಿಯೇ ಅವರ ಕಥೆಗಳಲ್ಲಿ ಊರುಗಳು ಮಾತ್ರವಲ್ಲ ಕೆಲವೊಮ್ಮೆ ನಮ್ಮ ನಿಮ್ಮ‌ ನಡುವಿನ ಜನರ ಅವರ ಹೆಸರುಗಳಲ್ಲೇ ಇಲ್ಲಿ ಪಾತ್ರವಾಗಿ ಬಿಡುತ್ತಾರೆ. ಹೀಗಾಗಿಯೇ ಇಲ್ಲಿಯ ಎಲ್ಲಾ ಕತೆಗಳ‌ನ್ನು ಓದುವುದು ಹೆಚ್ಚು ಆಪ್ತವಾಗುತ್ತವೆ.

ಮೂರು ಕತೆಗಳದು ವಿಭಿನ್ನ. ಹಂದರಗಳಿವೆ. ಅದರೆ ಪ್ರೀತಿಯ ಬದುಕಿನ ಚಿತ್ರಣಗಳಿವೆ.

ನಮ್ದೂ ಒಂದು ಬಾಳು ಕಥಾ ಸಂಕಲನದ ಮೊದಲ ಕಥೆ. ಬದುಕಿ‌ನ ಸಂಘರ್ಷ ಎದುರಿಸುವ ಜನರು ಓದಿದರೆ ಕಣ್ಣೀರಾಗುವುದರಲ್ಲಿ ಎರಡು ಮಾತಿಲ್ಲ.

ತುಂಬಾಡಿ ಹಾಲುಮತದವರ ಹುಡುಗಿಯನ್ನು ಅದೇ ಮನೆಯಲ್ಲಿ ಜೀತಕ್ಕಿದ್ದ ದಲಿತ ಸಮುದಾಯದ ಹುಡುಗ ಮದುವೆಯಾಗುವ ಮೂಲಕ ಆರಂಭವಾಗುವ ಕಥನ ಕೊನೆಗೆ ಮುಟ್ಟುವುದು ನೋವಿನ ಕಡಲಿಗೆ.

ಪ್ರೀತಿಗೆ ಗೆಲುವು ಸಿಕ್ಕರೂ ಕೊನೆಯಲ್ಲಿ ಇಡೀ ಬದುಕು ಎತ್ತತ್ತ ಸಾಗಿಸುತ್ತದೆ ಎಂಬುದೇ ಕತೆಯ ಕೂತೂಹಲ.

ಸಾಯುವುದಕ್ಕೆ ಅಲ್ಲ ನಾವು ಹುಟ್ಟಿರೋದು, ಬಾಳು ಬದುಕೋಗೆ ಎಂಬ ಮಾತುಗಳು ಬದುಕಿ ತೋರಿಸುವ ಛಲದ ಬಗ್ಗೆ ಹೇಳುತ್ತದೆ.

ಅವರು ಸಾಬರ ಜಾತಿಗೆ ಸೇರ್ಕಂಡವ್ರೆ ನಾವು ಹೆಂಗೆ ಹೋಗಾಲ ಆಗೈತಿ ಎಂಬ ಮಾತುಗಳು ಮತಾಂತರ ಬದುಕಿನ ಸಂಬಂಧಗಳ ನಡುವೆ ಸೃಷ್ಟಿಸುವ ಬಿಕ್ಕಟ್ಟನ್ನು ಹೇಳುತ್ತದೆ.

ಹೀಗೆ ಇಲ್ಲಿನ ಎಲ್ಲ ಕತೆಗಳ ಪಾತ್ರಗಳು ಕಷ್ಟದಲ್ಲೇ ಕೈ ತೊಳೆಯುತ್ತವೆ. ಆದರೂ ಬದುಕು ತೋರಿಸುವ ಛಲವನ್ನು ಪ್ರದರ್ಶನ ಮಾಡುತ್ತವೆ.

ಕನ್ನಡ ತೆಲುಗಿನ ಸಂಬಂಧ, ಮಾತುಕತೆಗಳು, ಸಂಭಾಷಣೆಗಳು, ಪಾತ್ರಗಳು ಎಲ್ಲವೂ ಮಧುಗಿರಿ, ಶಿರಾ, ಕೊರಟಗೆರೆಯ ಜನಜೀವನದಿಂದ ಮೇಲೆದ್ದ ಪಾತ್ರಗಳೇ ಆಗಿರುವುದರಿಂದ ಇಲ್ಲಿ ಸಾಮಾಜಿಕ ಆರ್ಥಿಕ ನೆಲೆಗಟ್ಟಿನಿಂದಲೂ ಇಲ್ಲಿಯ ಕಥೆಗಳು ಓದಿಗೆ, ಸಂಶೋಧನಾ ಅಧ್ಯಯನಕ್ಕೂ ಪೂರಕವಾಗಿದೆ.

Comment here