Tumkuru look kkoó
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೇವಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಗತ್ಯ ಮಾಹಿತಿ ಇಲ್ಲಿದೆ. ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ...
Publicstory
ಗುಬ್ಬಿ: ಕಸಬ ಹೋಬಳಿ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ಚಿರತೆಯು ದಾಳಿ ಮಾಡಿ ಶಿವಣ್ಣ ಎಂಬುವರಿಗೆ ಸೇರಿದ 8 ಕುರಿಗಳನ್ನು ಸಾಯಿಸಿರುವ ಘಟನೆ ನಡೆದಿದೆ. ರಾತ್ರಿ ಕುರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿದ್ದ ವೇಳೆಯಲ್ಲಿ...
ದೇವರಿಗೆ...
ದೇವರಿಗೆ
ವರುಷಕ್ಕೊಮ್ಮೆ
ರಥೋತ್ಸವ!
ಪರಿಸರ ಕಾಳಜಿಗೆ
ಒಮ್ಮೆ ವನಮಹೋತ್ಸವ
ಮನುಷ್ಯರಿಗೆ ಮಾತ್ರ
ದಿನಾ ನೂರೆಂಟು ಉತ್ಸವ!
*****
ಇಂದು ಭಾನುವಾರ
ನಮಗೂ ಗೊತ್ತು
ರಕ್ಷಿಸಬೇಕು
ಪರಿಸರ!
ನಾಳೆ ಪ್ರಾರಂಭಿಸುವೆವು
ಇಂದು ರಜಾ
ಭಾನುವಾರ!
*****
ಕಾರಣ ಅಲ್ಲ
ಭೂಮಿಯ
ಬಿಸಿಗೆ
ಬರೀ ಇಂಗಾಲ
ಕಾರಣ ಅಲ್ಲ!
ನಮ್ಮಿಬ್ಬರ
ಬಿಸಿಯುಸಿರೂ ಕಾರಣ
ಗೊತ್ತಾ ನಲ್ಲ?
******
ಮರತಬ್ಬಿ
ಆಗ ಅವನು
ಮರ ತಬ್ಬಿ
ನಡೆಸಿದ್ದ ಪರಿಸರ
ಚಳುವಳಿ!
ಈಗ ಮಡದಿಯ ತಬ್ಬಿ
ನೀಡಿದ್ದಾನೆ ಚಿನ್ನದಸರ
ಬಳುವಳಿ!
*****
ಕಾರಣ
ಎರಡು ಕಾರಣ
ಪರಿಸರ ನಾಶಕ್ಕೆ
ಒಂದು
ಕೈಗಾರಿಕೆಗಳ
ಹೊರಸೂಸುವಿಕೆ
ಮತ್ತೊಂದು
ಎಲ್ಲಂದರಲ್ಲಿ
ಮನುಷ್ಯರ
ಹೊರ "ಸೂಸು"ವಿಕೆ!
*~ತುರುವೇಕೆರೆ...